ಕಾರ್ಕಳ: ಕಾರು ಢಿಕ್ಕಿ; ವ್ಯಕ್ತಿ ಸ್ಥಳದಲ್ಲಿಯೇ ಮೃತ್ಯು.

ಕಾರ್ಕಳ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುಡಾರು ಗ್ರಾಮದ ಅಬ್ಬನಬೆಟ್ಟು ಬಸದಿ ಕ್ರಾಸ್ ಹತ್ತಿರ ಅ.2ರಂದು ಸಂಜೆ 7ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಮಿಯಾರು ಗ್ರಾಮದ ನಾರ್ಕಟ್ಟ ನಿವಾಸಿ ಪಾಂಡುರಂಗ(57) ಎಂದು ಗುರುತಿಸಲಾಗಿದೆ. ಕುಂಟಿಬೈಲು ಕಡೆಯಿಂದ ಕೆರ್ವಾಶೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾಂಡುರಂಗ ಅವರಿಗೆ ಕಾರು ಢಿಕ್ಕಿ ಹೊಡೆದಿದ್ದು, ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ […]