ಕಾರ್ಕಳ: ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳಾ ಸಿಬ್ಬಂದಿ

ಕಾರ್ಕಳ: ಇಂದು ಬೆಳಿಗ್ಗೆ ಕಾರ್ಕಳ ಮಾರ್ಕೆಟ್‌ ಬಳಿಯ ಖಾಸಗಿ ಸೊಸೈಟಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾರ್ಕಳ ಮಾರ್ಕೆಟ್ ರಸ್ತೆ ಬಳಿಯ ನಿವಾಸಿ ಪ್ರಮೀಳಾ ದೇವಾಡಿಗ (32) ಆತ್ಮಹತ್ಯೆ ಮಾಡಿಕೊಂಡವರು. ಇಂದು ಮುಂಜಾನೆ ಕಚೇರಿಗೆ ತೆರಳಿ ಕಚೇರಿಯಿಂದ ಮತ್ತೆ ಮನೆಗೆ ಬಂದು ತನ್ನ ಸೀರೆಯನ್ನು ತೆಗೆದುಕೊಂಡು ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರು ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಕಾರ್ಕಳ ಪೊಲೀಸರು ಸ್ಥಳಕ್ಕಾಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ […]

ಕಾರ್ಕಳ: ಕ್ರಿಯೇಟಿವ್ ಕಾಲೇಜಿನಲ್ಲಿ ಉಪಪ್ರಾಂಶುಪಾಲ ಹುದ್ದೆ ಖಾಲಿ

ಕಾರ್ಕಳ: ಇಲ್ಲಿನ ಕ್ರಿಯೇಟಿವ್ ಕಾಲೇಜಿನಲ್ಲಿ ಉಪಪ್ರಾಂಶುಪಾಲ ಹುದ್ದೆ ಖಾಲಿ ಇದ್ದು, ಎಂ.ಎ/ಎಂ.ಎಸ್ಸಿ, ಬಿ.ಎಡ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೀನಿಯರ್ ಸೆಕೆಂಡರಿ ಸಿ.ಬಿ.ಎಸ್.ಸಿ ಶಾಲೆ ಅಥವಾ ಪಿ.ಯು ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9606474298

ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿಗಳ ಮುಷ್ಕರ: ರೋಗಿಗಳಿಗೆ ಅನಾನುಕೂಲವಾಗದಂತೆ ಕ್ರಮವಹಿಸಲು ಸುನಿಲ್ ಕುಮಾರ್ ಮನವಿ

ಕಾರ್ಕಳ: ರಾಜ್ಯಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ 167 ಡಯಾಲಿಸಿಸ್‌ ಕೇಂದ್ರಗಳಲ್ಲಿ ಸುಮಾರು 900 ಡಯಾಲಿಸಿಸ್‌ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿ ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿಗಳು ವೇತನ ಹಾಗೂ ಇನ್ನಿತರ ಸೌಲಭ್ಯಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿರುವುದು ತಿಳಿದುಬಂದಿದೆ. ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರದಲ್ಲಿ ಒಟ್ಟು 05 ಜನ ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದು, ಡಯಾಲಿಸಿಸ್‌ ಕೇಂದ್ರದಲ್ಲಿ ನಿರಂತರವಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ದಿನ ಸುಮಾರು 15 ರಿಂದ 20 ರೋಗಿಗಳು ಡಯಾಲಿಸಿಸ್‌ಗೆ […]

ರಾಜಕೀಯ ಶಿಷ್ಟಾಚಾರ ಮೀರುತ್ತಿರುವ ಕಾಂಗ್ರೆಸ್ ಹಿಂಬಾಲಕರು; ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವ ಮಂತ್ರಿ ಮಾಗಧರು ಹದ್ದು ಮೀರಿ ವರ್ತಿಸುವುದು ತರವಲ್ಲ: ಕಾರ್ಕಳ ಬಿಜೆಪಿ

ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಬಹುಮತದಿಂದ ಅಧಿಕಾರಕ್ಕೆ ಬಂದ ಬಳಿಕ ಕೆಲವು ಸಚಿವರು, ನಾಯಕರು ಮತ್ತು ಆ ನಾಯಕರ ಚೇಲಾಗಳು ಶಿಷ್ಟಾಚಾರ ಮೀರಿ ವರ್ತಿಸುತ್ತಿರುವುದು ಕಂಡುಬರುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿ ಕಾರ್ಕಳ ಇದರ ಅಧ್ಯಕ್ಷ ಮಹಾವೀರ್ ಹೆಗ್ಡೆ ಹೇಳಿದ್ದಾರೆ. ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ.ಪಾಟೀಲ್‌ ಸಹಿತ ಕೆಲವರು ತಮ್ಮ ಇಲಾಖೆಗಳಿಗೆ ಸಂಬಂಧಪಡದ, ಸಂಘರ್ಷಕ್ಕೆ ಕಾರಣವಾಗಬಹುದಾದಂಥ ಹೇಳಿಕೆಗಳನ್ನು ನೀಡಿ ಹಲವು ಸಲ ಸರಕಾರಕ್ಕೆ ಮುಜುಗರವುಂಟಾಗುವ ಪರಿಸ್ಥಿತಿ ಉಂಟು ಮಾಡಿದ್ದಾರೆ. ಸೋತ ಪಕ್ಷವನ್ನು ಟೀಕಿಸುವ ಭರದಲ್ಲಿ ಅವರು ನೀಡುತ್ತಿರುವ […]

ಜೆ ಇ.ಇ ಅಡ್ವಾನ್ಸ್ ಫಲಿತಾಂಶ: ಜ್ಞಾನಸುಧಾ ಕಾಲೇಜಿಗೆ ಹತ್ತು ಸಾವಿರದೊಳಗೆ 10 ರ‍್ಯಾಂಕ್

ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್ನ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು ಜ್ಞಾನಸುಧಾಕ್ಕೆ 10 ಸಾವಿರದೊಳಗಿನ 10 ರ‍್ಯಾಂಕುಗಳು ಬಂದಿರುತ್ತದೆ. ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ 3918ನೇ ರ‍್ಯಾಂಕ್, ಪ್ರಣವ್ ಗುಜ್ಜರ್ 5601ನೇ ರ‍್ಯಾಂಕ್, ಸಮೃದ್ಧ್ನೆಲ್ಲಿ 5769ನೇ ರ‍್ಯಾಂಕ್ ಹಾಗೂ ಜನರಲ್ ಇ.ಡಬ್ಲು.ಎಸ್ ಕೆಟಗರಿಯಲ್ಲಿ 715ನೇ ರ‍್ಯಾಂಕ್, ಒ.ಬಿ.ಸಿ-ಎನ್.ಸಿ.ಎಲ್ ಕೆಟಗರಿಯಲ್ಲಿ ಸಾಯಿ ಲಿಖಿತ್ ರೆಡ್ಡಿ 3947 ನೇ ರ‍್ಯಾಂಕ್, ಅಮೃತ್ ಗೌಡ ಎಂ. ಪಾಟೀಲ್ 4117 ನೇ ರ‍್ಯಾಂಕ್, […]