ಜುಲೈ 10 ರಂದು ಜಿಲ್ಲಾ ಮಲೆ ಕುಡಿಯ ಸಂಘದ ಮಹಾಸಭೆ

ಮಾಳ: ಜಿಲ್ಲಾ ಮಲೆ ಕುಡಿಯ ಸಂಘದ ಮಹಾಸಭೆಯು ಜುಲೈ 10 ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಅಧ್ಯಕ್ಷ ಬಾಲಗಂಗಾಧರ ಬಿ.ಗೌಡ ಇವರ ಅಧ್ಯಕ್ಷತೆಯಲ್ಲಿ, ಸಂಘದ ಕೇಂದ್ರ ಕಚೇರಿ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ಜರುಗಲಿದ್ದು, ಸಂಘದ ಎಲ್ಲಾ ಸದಸ್ಯರು ಸಭೆಯಲ್ಲಿ ಹಾಜರಿದ್ದು ಸಹಕರಿಸುವಂತೆ ಆಡಳಿತ ಮಂಡಳಿಯು ತಿಳಿಸಿದೆ.  

ಅಪ್ರಾಪ್ತ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಕಾರ್ಕಳ ಯುವಕನ ಬಂಧನ

ಕಾರ್ಕಳ: ಕಾರ್ಕಳದ ಹುಡ್ಕೋ ನಿವಾಸಿ, ಅನ್ಯಕೋಮಿನ ಹುಡುಗ ಮಹಮ್ಮದ್ ಯಾಸಿನ್ (21) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾರ್ಕಳದ ಹಿಂದೂ ಅಪ್ರಾಪ್ತ ಬಾಲಕಿ(14)ಗೆ ಕಿರುಕುಳ ನೀಡುತ್ತಿದ್ದು, ಈತನ ಮೇಲೆ ದಾಖಲಾದ ದೂರಿನ ಮೇಲೆ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಪರಿಚಯ ಮಾಡಿಕೊಂಡಿದ್ದು, ಆಕೆಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಇದಲ್ಲದೆ, ತನ್ನನ್ನು ಪ್ರೀತಿಸುವಂತೆ ಹಾಗೂ ತನ್ನ ಜೊತೆ ಬರುವಂತೆ ಆಕೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಶುಕ್ರವಾರ ನಗರ […]

ಎನ್.ಇ.ಎಸ್.ಟಿ -2022: ಜ್ಞಾನಸುಧಾ ಕಾಲೇಜಿನ ಮೂರು ವಿದ್ಯಾರ್ಥಿಗಳಿಗೆ ರ‍್ಯಾಂಕ್

ಕಾರ್ಕಳ: ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್ ಎಜ್ಯುಕೇಶನ್‌ ಮತ್ತು ರಿಸರ್ಚ್(ಎನ್.ಐ.ಎಸ್.ಇ.ಆರ್) ಭುವನೇಶ್ವರ್ ಹಾಗೂ ಬಾಂಬೆ ಯುನಿವರ್ಸಿಟಿ ಜಂಟಿಯಾಗಿ ನಡೆಸಿದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ನೆಸ್ಟ್-2022 ರಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ.ಪಿ.ಶೆಟ್ಟಿ (99.187 ಪರ್ಸಂಟೈಲ್),113ನೇ ರ‍್ಯಾಂಕ್, ಪ್ರಜ್ವಲ್ ಪಟಗಾರ್(97.851 ಪರ್ಸಂಟೈಲ್), 279ನೇ ರ‍್ಯಾಂಕ್‌ನ ಜೊತೆಗೆ ಒಬಿಸಿಯಲ್ಲಿ 53ನೇ ರ‍್ಯಾಂಕ್ ಮತ್ತು ಸೃಜನ್ ಪ್ರಕಾಶ್(89.307ಪರ್ಸಂಟೈಲ್), 1123 ನೇ ರ‍್ಯಾಂಕ್‌ ಜೊತೆಗೆ, ಒಬಿಸಿಯಲ್ಲಿ 302 ನೇ ರ‍್ಯಾಂಕ್ ಪಡೆದಿದ್ದಾರೆ. ರಾಷ್ಟ್ರಾದ್ಯಂತ ಜೂನ್ 18ರಂದು ನ್ಯಾಷನಲ್‌ ಎಂಟ್ರೆನ್ಸ್ ಸ್ಕ್ರೀನಿಂಗ್ […]

ಕಾರ್ಕಳ: ಮೂರು ಮಾರ್ಗದ ಬಳಿ ಬಸ್ ನಿಲುಗಡೆ ಪುನರ್ ಸ್ಥಾಪಿಸುವಂತೆ ಪುರಸಭಾ ಸದಸ್ಯ ಶುಭದರಾವ್ ಒತ್ತಾಯ

ಕಾರ್ಕಳ: ಇಲ್ಲಿನ ವಿದ್ಯಾ ಸಂಸ್ಥೆಗಳಾದ ಕ್ರೈಸ್ಟ್ ‌ಕಿಂಗ್ ಪದವಿ ಪೂರ್ವಕಾಲೇಜು, ಶ್ರೀ ಭುವನೇಂದ್ರ ಹೈಸ್ಕೂಲ್ ಮತ್ತು ಎಸ್.ವಿ. ಟಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್ ಮೂಲಕ ಆನೆಕೆರೆ – ಮೂರು ಮಾರ್ಗವಾಗಿ ಸಂಚರಿಸುತ್ತಿದ್ದು, ಮೂರು‌ ಮಾರ್ಗದ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಇಳಿದು ಕಾಲೇಜುಗಳಿಗೆ ತೆರಳುತ್ತಿದ್ದರು‌. ಈ ನಿಲುಗಡೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ತೆರಳಲು ಅನುಕೂಲವಾಗುತ್ತಿತ್ತು. ಆದರೆ ಈಗ ಪುರಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಪೆಟ್ರೋಲ್ ಪಂಪ್ ಬಳಿ ಬಸ್ ಗಳನ್ನು ನಿಲ್ಲಿಸಲು ಏಕಾಏಕಿ ನಿರ್ಬಂಧ […]

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಮಣ್ಣು ಉಳಿಸಿ ಅಭಿಯಾನ

ಗಣಿತನಗರ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಈಶ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಮಣ್ಣು ಉಳಿಸಿ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕ ಮತ್ತುನಿಟ್ಟೆ ಯುನಿವರ್ಸಿಟಿ ಪ್ರೊಫೆಸರ್ ಸಭ್ಯತ್ ಶೆಟ್ಟಿ, ಸದ್ಗುರು ಜಗ್ಗಿ ವಾಸುದೇವ್ ರವರು ಸಂಘಟಿಸಿ ನಡೆಸುತ್ತಿರುವ ವಿಶ್ವಮಟ್ಟದ ಮಣ್ಣು ಉಳಿಸಿ ಅಭಿಯಾನದ ಹಿನ್ನೆಲೆ, ಮಹತ್ವವನ್ನು ವಿವರಿಸಿದರು. ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರಾದ ಯಶ್ ಶೆಟ್ಟಿ, ಮಂಗಳಾ ಚಂದ್ರಕಾಂತ್, ಪದ್ಮಜಾ, ರಾಜೇಶ್ ಪ್ರಭು, ಪ್ರೀತೇಶ್ […]