ಕಾರ್ಕಳ: ಸೆಪ್ಟೆಂಬರ್ 02 ರಂದು ಹೋಟೆಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನೆ

ಕಾರ್ಕಳ: ಹೋಟೆಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 02 ಶುಕ್ರವಾರದಂದು ರಾ.ಹೆದ್ದಾರಿ 169 ರ ಕುದುರೆಮುಖ ರಸ್ತೆಯ ಪುಲ್ಕೇರಿ ಬೈಪಾಸ್ ಬಳಿ ನಡೆಯಲಿದೆ. ಹೋಟೆಲ್ ಮಯೂರ ಇಂಟರ್ ನ್ಯಾಶನಲ್ ನಲ್ಲಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ವ್ಯವಸ್ಥೆ, ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಬಾಂಕ್ವೆಟ್ ಹಾಲ್ ಗಳಿರಲಿವೆ. ವಿಳಾಸ: ರಾ.ಹೆ169, ಕುದುರೆಮುಖ ರಸ್ತೆ ಪುಲ್ಕೇರಿ ಬೈಪಾಸ್ ಕಾರ್ಕಳ 574-104
ಮರಗಳ ತೆರವು: ಸೆಪ್ಟಂಬರ್ 3 ರಂದು ಕಾರ್ಕಳ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ

ಉಡುಪಿ: ಹೆಬ್ರಿ ತಾಲೂಕು ವರಂಗ ಗ್ರಾಮದ ಕಾಡುಹೊಳೆ ಸೇತುವೆಯಿಂದ ಚಟ್ಕಲ್ ಪಾದೆ ಜಂಕ್ಷನ್‌ವರೆಗೆ ಹಾಗೂ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕೈಕಂಬದಿಂದ ದೊಂಡೆರಂಗಡಿಯವರೆಗೆ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗುವ 236 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಸೆಪ್ಟಂಬರ್ 3 ರಂದು ಮಧ್ಯಾಹ್ನ 3 ಗಂಟೆಗೆ ಕಾರ್ಕಳ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸಭೆ ನಡೆಯುವ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ […]
ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ವಾರಸುದಾರರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನ

ಉಡುಪಿ: ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರು ಪರಿಹಾರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಮೇ 15 ಕ್ಕಿಂತ ಮೊದಲು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದ್ದು, ಮೇ 16 ರ ನಂತರ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು 90 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಪ್ರಯೋಗಾಲಯದಿಂದ ಪಡೆದಿರುವ ಮೃತ ವ್ಯಕ್ತಿಯ ಪಾಸಿಟಿವ್ ರಿಪೋರ್ಟ್, ಸಂಬಂಧಿಸಿದ ಆಸ್ಪತ್ರೆಯ ರಿಪೋರ್ಟ್, ಕೋವಿಡ್ ದೃಢಪಟ್ಟ ರೋಗಿ […]
ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ

ಕಾರ್ಕಳ: ಜ್ಞಾನಸುಧಾ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 101ನೇ ಜನ್ಮದಿನಾಚರಣೆಯ ಪ್ರಯುಕ್ತ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಗಣಿತ ನಗರ ಹಾಗೂ ನಾಗಬನ ಕ್ಯಾಂಪಸ್ ಉಡುಪಿ, ಜ್ಞಾನಸುಧಾ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕ, ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕಾರ್ಕಳ – ಕುಂದಾಪುರ ಇವರ ಸಹಯೋಗದೊಂದಿಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ರೆಡ್‌ಕ್ರಾಸ್ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷ ಖ್ಯಾತ ವೈದ್ಯ […]
ಜ್ಞಾನಸುಧಾ ಸಂಸ್ಥಾಪಕರ ದಿನದ ಅಂಗವಾಗಿ ಆಗಸ್ಟ್ 21 ರಂದು ರಕ್ತದಾನ ಶಿಬಿರ

ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಗಣಿತನಗರ ಕಾರ್ಕಳ, ನಾಗಬನ ಕ್ಯಾಂಪಸ್ ಉಡುಪಿ, ಜ್ಞಾನಸುಧಾ ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಹಳೆ ವಿದ್ಯಾರ್ಥಿ ಸಂಘ, ರೆಡ್ ಕ್ರಾಸ್ ಸೊಸೈಟಿ ಕಾರ್ಕಳ-ಕುಂದಾಪುರದ ಸಹಯೋಗದೊಂದಿಗೆ ಜ್ಞಾನಸುಧಾ ಸಂಸ್ಥಾಪಕರ ದಿನದ ಅಂಗವಾಗಿ ಆಗಸ್ಟ್ 21 ರಂದು ಗಣಿತ ನಗರ ಕ್ಯಾಂಪಸ್ ನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.