ನೀಟ್‌ ಫಲಿತಾಂಶ : ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ

ಕಾರ್ಕಳ : ಎಂ.ಬಿ.ಬಿ.ಎಸ್‌ ಹಾಗೂ ಇತರ ವೈದ್ಯಕೀಯ ಕ್ಷೇತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾದ 9 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 76 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ. ಅಖಿಲ್‌.ಯು.ವಾಗ್ಲೆ 99.87ಪರ್ಸಂಟೈಲ್‌ ನೊಂದಿಗೆ 665 ಅಂಕ, ಪ್ರಜ್ವಲ್‌ ಜೆ.ಪಿ. 655 ಅಂಕ, ಆರ್ಯ.ಪಿ ಶೆಟ್ಟಿ 640 ಅಂಕ, ಅನಿರುದ್ಧ್‌ ಭಟ್‌ 640 ಅಂಕ, ರಮ್ಯ ಎಸ್‌.ಗೌಡ 630 ಅಂಕ, ಕಾರ್ತಿಕ್‌ ಬ್ಯಾಕೊಡ್‌ 626 ಅಂಕ, ಶರ್ಮದಾ 613 ಅಂಕ, ಆರ್ಯನ್‌.ವಿದ್ಯಾಧರ್.ಶೆಟ್ಟಿ 610 ಅಂಕ, […]

ಪ್ರಾಥಮಿಕ ಶಾಲಾ ಶಿಕ್ಷಕರು ನೆನಪಿನಲ್ಲಿ ಉಳಿಯುವ ಅತ್ಯಮೂಲ್ಯ ವ್ಯಕ್ತಿಗಳು: ಡಾ. ಉದಯ್ ಕುಮಾರ್ ಶೆಟ್ಟಿ

ಕಾರ್ಕಳ: ಶಿಕ್ಷಣ ಕೇವಲ ಜ್ಞಾನ ನೀಡುವ ಉದ್ದೇಶವನ್ನು ಹೊಂದಿರದೆ ವಿದ್ಯಾರ್ಥಿಗಳಲ್ಲಿ ಮೌಲ್ಯವರ್ಧನೆ ಮಾಡುವ ಗುರಿಯನ್ನೂ ಹೊಂದಿದೆ. ಈ ಗುರಿಯನ್ನು ಸಾಕಾರಗೊಳಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ನಮ್ಮ ಮನದಾಳದಲ್ಲಿ ಸದಾ ಕಾಲ ನೆಲೆಯೂರುವ ಅತ್ಯಮೂಲ್ಯ ವ್ಯಕ್ತಿಗಳು. ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂತೋಷ ನನಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು […]

ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ನಿವೃತ್ತ ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ

ಉಡುಪಿ: ಇಂದಿನ ಶಿಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ರಸಕ್ಕಿಂತ ಕಸವೇ ಹೆಚ್ಚು ತುಂಬಿದೆ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಸಹ ಕೈ ಜೋಡಿಸಿದಲ್ಲಿ ಆದರ್ಶ ಸಮಾಜ ನಿರ್ಮಾಣವಾವಾಗಲು ಸಾಧ್ಯ ಎಂದು ಉಡುಪಿಯ ಡಾ.ಟಿ.ಎಂ.ಎ.ಪೈ.ಕಾಲೇಜ್‌ ಆಫ್‌ ಎಜ್ಯುಕೇಷನ್‌ ಸಂಸ್ಥೆಯ ಸಂಯೋಜನಾಧಿಕಾರಿ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್‌ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಹಿರಿಯ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಎರಡನೆ ಪಾಲಕರು. ಅಂತಹ […]

ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಬಲ್ಲಾಡಿ ಚಂದ್ರಶೇಖರ ಭಟ್ ಆಯ್ಕೆ

ಹೆಬ್ರಿ : ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಹೆಬ್ರಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ, ಸಾಹಿತ್ಯ, ಸಂಘಟನೆ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಪರಿಗಣಿಸಿ ಕೊಡಮಾಡುವ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ-2022 ಈ ಬಾರಿ ಮುದ್ರಾಡಿ ಪ್ರೌಢ ಶಾಲೆಯ ಆಂಗ್ಲಭಾಷಾ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಅವರಿಗೆ ಲಭಿಸಿದೆ. ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಸೆ.5 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ […]

ಕಾರ್ಕಳ: ಹೊಟೇಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನೆ

ಕಾರ್ಕಳ: ಶುಕ್ರವಾರದಂದು ಇಲ್ಲಿನ ಕುದುರೆಮುಖ ರಸ್ತೆಯ ಪುಲ್ಕೇರಿ ಬೈಪಾಸ್ ಬಳಿ ನೂತನವಾಗಿ ನಿರ್ಮಿಸಿದ ವಸತಿ ಗೃಹ, ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಲಲಿತಾ ಸಭಾಂಗಣವನ್ನೊಳಗೊಂಡ ಹೊಟೇಲ್ ಮಯೂರ ಇಂಟರ್ ನ್ಯಾಶನಲ್ ನ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಲ್ಲೂರು ಪರವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಹುರ್ಲಾಡಿ ರಘುವೀರ್ ಎ. ಶೆಟ್ಟಿ ಮಾತನಾಡಿ, ಉದ್ಯಮದಲ್ಲಿ ಸಮಾಜ ಸೇವೆಯೊಂದಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ದೇವರ ಅನುಗ್ರಹ ಲಭ್ಯವಾಗಿ ಯಶಸ್ವಿಯಾಗುತ್ತದೆ. ಈ ಸಂಸ್ಥೆಯೂ ಯಶಸ್ಸನ್ನು ಕಾಣಲಿ ಎಂದು […]