ಕ್ರಿಯೇಟಿವ್‌ ಪಿಯು ಕಾಲೇಜಿನಲ್ಲಿ ಕೆಸರ್ಡೊಂಜಿ ದಿನ ಕಾರ್ಯಕ್ರಮ

ಕಾರ್ಕಳ: ಕ್ರಿಯೇಟಿವ್‌ ಪ.ಪೂ. ಕಾಲೇಜಿನಲ್ಲಿ ಹಸಿರೊಡನೆ ಕಲಿಕೆಯ ಕಲರವ ಕಾರ್ಯಕ್ರಮ ಸೆ.19ರಂದು  ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ  ಹರಿಶ್ಚಂದ್ರ ಕುಲಾಲ್‌, ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ ಆದರೆ ನಮಗೆ ಅನ್ನ ನೀಡುವ ಕೃಷಿ ಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]

ತ್ರೋಬಾಲ್‌ ಪಂದ್ಯಾಟ: ಜ್ಞಾನಸುಧಾ ಬಾಲಕಿಯರ ತಂಡ ಪ್ರಥಮ; ಬಾಲಕರ ತಂಡ ದ್ವಿತೀಯ ಸ್ಥಾನ

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿದ್ಯಾವರ್ಧಕ ಪಿಯು ಕಾಲೇಜು ಮುಂಡ್ಕೂರು ಜಂಟಿ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ತ್ರೋಬಾಲ್‌ ಪಂದ್ಯಾಟದಲ್ಲಿ ಭಾಗವಹಿಸಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಜ್ಞಾನಸುಧಾ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ತಂಡದ ವಿದ್ಯಾರ್ಥಿಗಳಾದ ಸನತ್‌ ಪಿದೈ, ಪ್ರತೀಕ್‌, ಮತ್ತು ಅಂಕಿತ್‌ ಜಿಲ್ಲಾ ಮಟ್ಟದಲ್ಲಿ ನಡೆಯುವ ಬಾಲಕರ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕು.ಸ್ವಾತಿ […]

ಕೆ.ಇ.ಬಿ ನಿವೃತ್ತ ಇಂಜಿನಿಯರ್ ಪ್ರಕಾಶಚಂದ್ರ ಕುಂದಾಪುರ ನಿಧನ

ಕಾರ್ಕಳ: ಕೆ.ಇ.ಬಿ.ಯ ನಿವೃತ್ತ ಎಕ್ಸೀಕೂಟಿವ್ ಇಂಜಿನಿಯರ್ ಪ್ರಕಾಶಚಂದ್ರ ಕುಂದಾಪುರ (74ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಅಸ್ಪತ್ರೆಯಲ್ಲಿ ಸೆಪ್ಟೆಂಬರ್ 10 ರಂದು ರಾತ್ರಿ ನಿಧನರಾಗಿದ್ದಾರೆ. ಮತೃರು ಕಾರ್ಕಳದಲ್ಲಿ ಪ್ರಾಮಾಣಿಕ ಕೆಲಸದಿಂದ ಜನಮನ್ನಣೆ ಪಡೆದು ಜನಪ್ರಿಯರಾಗಿದ್ದರು. ಈ ಮೊದಲು ಕುಂದಾಪುರ ಮತ್ತು ಜೋಗಫಾಲ್ಸ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ

ಗೃಹರಕ್ಷಕರ ಅಧಿಕಾರಿಗಳ ತರಬೇತಿ: ಶ್ರೀಪ್ರಸಾದ್ ಅವರಿಗೆ ಬೆಳ್ಳಿಪದಕ

ಉಡುಪಿ: ಆಗಸ್ಟ್ 1 ರಿಂದ 29 ರ ವರೆಗೆ ರವರೆಗೆ ಬೆಂಗಳೂರಿನ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಗೃಹರಕ್ಷಕರ ಅಧಿಕಾರಿಗಳ ತರಬೇತಿಯಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಾರ್ಕಳ ಘಟಕದ ಗೃಹರಕ್ಷಕ ಶ್ರೀಪ್ರಸಾದ್ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರನ್ನು ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ ಗೃಹರಕ್ಷಕ ದಳ ಸಂಸ್ಥೆಯ ವತಿಯಿಂದ ಅಭಿನಂದಿಸಿರುತ್ತಾರೆ.

ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ಕ್ರಿಯೇಟಿವ್ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ 

  ಕಾರ್ಕಳ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ 646, ಸಾತ್ವಿಕ್‌ ಶ್ರೀಕಾಂತ್‌ ಹೆಗಡೆ 641, ಸೋಹನ್‌ ಎಸ್‌ ನೀಲಕರಿ 598, ಸುದೀಪ್‌ ಅಸಂಗಿಹಾಲ್‌ 552, ಹಾಸನದ ವಿಕಾಸ್‌ ಗೌಡ ಎಂ 608 ಅಂಕಗಳನ್ನು ಗಳಿಸಿದ್ದಾರೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ನಿರ್ಮಿಸಿರುವ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನಡೆಯುತ್ತಿದೆ. ಕಾಲೇಜಿನ […]