ಕೋಟಿ ಚೆನ್ನಯ್ಯ ಥೀಂ ಪಾರ್ಕಿನಲ್ಲಿ ರಾಮ ನಿರ್ಯಾಣ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

ಉಡುಪಿ: ಕಾರ್ಕಳ ತಾಲೂಕಿನ ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ರಚನೆಯ ನಂತರ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೂಚಿಸಿದ ಹಿನ್ನೆಲೆ, ನವೆಂಬರ್ 26 ರಂದು ಸಂಜೆ 5.30 ಕ್ಕೆ ಕೋಟಿ ಚೆನ್ನಯ್ಯ ಥೀಂ ಪಾರ್ಕ್ನಲ್ಲಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಸಿದ್ಧ ಕಲಾವಿದರಿಂದ ರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಸಮಿತಿಯ ಹಿರಿಯ ಸದಸ್ಯ ಭಾಸ್ಕರ್ ಎಸ್.ಕೋಟ್ಯಾನ್, ಕನ್ನಡ ಮತ್ತು ಸಂಸ್ಕೃತಿ […]

ಕಾರ್ಕಳ ತಹಶೀಲ್ದಾರರ ಗ್ರಾಮ ವಾಸ್ತವ್ಯ ಮುಂದೂಡಿಕೆ

ಉಡುಪಿ: ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನವೆಂಬರ್ 19 ರಂದು ಆಯೋಜಿಸಲಾಗಿದ್ದ ಕಾರ್ಕಳ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾರ್ಕಳ: ನವೆಂಬರ್ 18 ರಂದು ವಿದ್ಯುತ್ ವ್ಯತ್ಯಯ

ಕಾರ್ಕಳ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುವುದರಿಂದ ನವೆಂಬರ್ 18 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ 110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಟಿ.ಎಂ.ಸಿ, ಜಾರ್ಕಳ, ಅಜೆಕಾರು ಮತ್ತು ಹಿರ್ಗಾನ ಫೀಡರ್‌ನಲ್ಲಿ ದುರ್ಗಾ, ಮಲೆಬೆಟ್ಟು, ಕಡಂಬಳ, ಹಿರ್ಗಾನ, ಮುಜೂರು, ನೆಲ್ಲಿಕಟ್ಟೆ, ಎಣ್ಣೆಹೊಳೆ, ಚಿಕ್ಕಾಲ್ ಬೆಟ್ಟು, ಹೆರ್ಮುಂಡೆ, ಬಂಗ್ಲೆಗುಡ್ಡೆ, ಬಂಡಿಮಠ, ಕಲ್ಲೊಟ್ಟೆ, ಪೆರ್ವಾಜೆ, ತೆಳ್ಳಾರು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿಸ್ಥಾನ, ಗಣಿತನಗರ, ಜಾರ್ಕಳ, ಮಂಗಿಲಾರು, ಅಜೆಕಾರು, ಅಂಡಾರು, ಕಡ್ತಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ […]

ನವೆಂಬರ್ 19 ರಂದು ಇರ್ವತ್ತೂರಿನಲ್ಲಿ ಕಾರ್ಕಳ ತಹಶೀಲ್ದಾರ್ ಗ್ರಾಮವಾಸ್ತವ್ಯ

ಉಡುಪಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಕಾರ್ಕಳ ತಾಲೂಕು ತಹಶೀಲ್ದಾರರು ನವೆಂಬರ್ 19 ರಂದು ಇರ್ವತ್ತೂರು ಗ್ರಾಮದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದು, ಇರ್ವತ್ತೂರು ಗ್ರಾಮದ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಕಳ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

ಕಾರ್ಕಳ: ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಪುತ್ಥಳಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ

ಕಾರ್ಕಳ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು ಇದರ ಕಾರ್ಕಳ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಕಳ ಬೈಪಾಸ್ ರಸ್ತೆ ಶ್ರೀ ಭವಾನಿ ಮಿಲ್ ಬಳಿ ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಎತ್ತರದ ಪುತ್ಥಳಿಯುಳ್ಳ ವೃತ್ತ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಶನಿವಾರದಂದು ನಡೆಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಬೈಕ್ ಜಾಥಾ ನಡೆಯಿತು. ಕೃಪೆ: ವಿ. ಸುನಿಲ್ ಕುಮಾರ್/ಟ್ವಿಟರ್