ಕಾರ್ಕಳ: ನೂರಾಲ್‌ಬೆಟ್ಟುವಿನಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಕಾರ್ಕಳ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಕಾರ್ಕಳ ತಾಲೂಕು ನೂರಾಲ್‌ಬೆಟ್ಟು ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರದ ಸ್ವಾಮ್ಯದ ನಿಗಮ/ ಉದ್ಯಮ ಅಥವಾ ಕಂಪೆನಿಗಳು ಅಥವಾ ಗ್ರಾಮ ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು, ತಾಲೂಕು ಕೃಷಿ ಪ್ರಾಥಮಿಕ ಸಂಘಗಳು, ಸಹಕಾರ ಮಾರಾಟ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ವಿ.ಎಸ್.ಎಸ್.ಎನ್, ಹಾಪ್‌ಕಾಮ್ಸ್, ನೋಂದಾಯಿತ ಸಹಕಾರ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕ ಸಹಕಾರ ಸಂಘ, ಲ್ಯಾಂಪ್ಸ್ ಆದಿವಾಸಿಗಳ ವಿವಿದ್ಧೋದ್ದೇಶ […]

ಕಾರ್ಕಳ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಇಲ್ಲಿನ ಹಿರ್ಗಾನ ಕುಂದೇಶ್ವರ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಸಂಪತ್ ಭಂಡಾರಿ(30) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಾರ್ಕಳ: ಜ.27 ರಂದು ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ

ಕಾರ್ಕಳ: ಇಲ್ಲಿನ ಬೈಲೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪರಶುರಾಮ ಠೀಂಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮವು ಜ.27 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಜ.28 ರಂದು ಭಜನಾ ಮಂದಿರ ಉದ್ಘಾಟನೆ ನಡೆಯಲಿದ್ದು, ಪಳ್ಳಿ ಕ್ರಾಸ್ ನಿಂದ ಥೀಮ್ ಪಾರ್ಕ್ ವರೆಗೆ ಭಜನಾ ಮೆರವಣಿಗೆ ಆಯೋಜಿಸಲಾಗಿದೆ.     ಜ.27 ರಿಂದ 29 ರವೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೈವಿಧ್ಯಮಯ ತಿಂಡಿ ತಿನಿಸುಗಳ ಆಹಾರ ಮೇಲ ಮತ್ತು ಕರಕುಶಲ ವಸ್ತು ಪ್ರದರ್ಶನವು ನಡೆಯಲಿದೆ. ಮಕ್ಕಳಿಗಾಗಿ ಅಮ್ಯೂಸ್ ಮೆಂಟ್ ಗೇಮ್ ಪಾರ್ಕ್ […]

ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ: ಇಬ್ಬರು ವಿದ್ಯಾರ್ಥಿ; ಮೂವರು ಶಿಕ್ಷಕಿಯರಿಗೆ ಗಂಭೀರ ಗಾಯ

ಕಾರ್ಕಳ: ರಾಜ್ಯ ಹೆದ್ದಾರಿಯ ಪಾಜೆಗುಡ್ಡ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್‌ ಪಲ್ಟಿ ಹೊಡೆದ ಘಟನೆ ವರದಿಯಾಗಿದೆ. ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಲೂರು ಸಮೀಪ ಇಂದು ಈ ಘಟನೆ ನಡೆದಿದ್ದು, ಬಸ್‌ನಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಿದ್ದರು. ಇಲ್ಲಿನ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಸ್ ಶಾಲಾ ಪ್ರವಾಸ ನಿಮಿತ್ತ ಈ ಹೆದ್ದಾರಿಯಲ್ಲಿ ಸಾಗುತ್ತಿತ್ತು. ದುರಾದೃಷ್ಟವಶಾತ್ ಮಕ್ಕಳ ಬಸ್‌ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ ಘಟನೆಯಲ್ಲಿ ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಪ್ರಮಾಣದ […]

ಪಶ್ಚಿಮಘಟ್ಟ ತಪ್ಪಲಿನ ಔಷಧೀಯ ಸಸ್ಯಗಳ ಬೆಳೆಗೆ ಸರ್ವ ಸಹಕಾರ: ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಎಲ್ಲಾ ಕ್ಯಾಂಪ್ಕೋ ಸದಸ್ಯರ ಮೂಲಕ ಪಶ್ಚಿಮಘಟ್ಟ ತಪ್ಪಲಿನ ಔಷಧೀಯ ಸಸ್ಯಗಳ ಬೆಳೆಗೆ ಎಲ್ಲಾ ರೀತಿಯ ಅಗತ್ಯ ಪ್ರೋತ್ಸಾಹ ನೀಡುವುದಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಹೇಳಿದರು. ಅವರು ಗುರುವಾರ ಕಾರ್ಕಳ ತಾಲೂಕು ಬಜಗೋಳಿಯ ತ್ರಿಭುವನ ಮಾಳದಲ್ಲಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕಾಂಪ್ಕೋ ಮಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಪ್ರಾಯೋಜಿತ ಯೋಜನೆ […]