ಕಾರ್ಕಳ: ಜ. 13 ರಂದು ವಿದ್ಯುತ್ ವ್ಯತ್ಯಯ

ಕಾರ್ಕಳ: 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿ ಕಾರ್ಯ ಹಮ್ಮಿಕೊಂಡಿರುವುದರಿಂದ ಸದರಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೈಲೂರು ಎಕ್ಸ್ಪ್ರೆಸ್ ಫೀಡರ್‌ಗಳ, ಬೈಲೂರು, ಜಾರ್ಕಳ, ಪಳ್ಳಿ, ನೀರೆ, ಎರ್ಲಪಾಡಿ, ಕೌಡೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನವರಿ 13 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕುರಿತ ಪೂರ್ವಾಭಾವಿ ಸಭೆ

ಕಾರ್ಕಳ: ಇಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕುರಿತ ಪೂರ್ವಾಭಾವಿ ಸಭೆ ಸೋಮವಾರದಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಜನಸೇವಾ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್ ಜ. 27 ರಿಂದ 30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಕಳ ಉತ್ಸವಕ್ಕೆ ಸಹಕರಿಸಿದ ರೀತಿಯಲ್ಲಿ ಸಹಕರಿಸಬೇಕು ಎಂದರು. ಪ್ರತಿ ಗ್ರಾ.ಪಂ ನಲ್ಲೂ ಪೂರ್ವಸಿದ್ದತೆ ಬಗ್ಗೆ ಮಾಹಿತಿ ನೀಡಿದ ಅವರು ಜ.18 ರಂದು 10 ಗಂಟೆಗೆ ಥೀಮ್ ಪಾರ್ಕಿನ […]

ವ್ಯಕ್ತಿಯ ಜೀವನದ ಮೊದಲ 25 ವರ್ಷಗಳು ಆತನ ಸಂಪೂರ್ಣ ಜೀವನವನ್ನು ರೂಪಿಸುತ್ತದೆ: ವಿದ್ಯಾವಂತ ಆಚಾರ್ಯ

ಕಾರ್ಕಳ: ಅಕ್ಷರಂ ಬ್ರಹ್ಮಾಸಿ ಎಂದರೆ ‘ಅಕ್ಷರವೇ ದೇವರು’. ಯಾರು ಅದನ್ನು ಹೇಳಿಕೊಡುತ್ತಾರೆ ಅವರು ದೇವರಿಗೆ ಸಮಾನ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವ ಚಟುವಟಿಕೆಗಳಿಗೂ ಇಲ್ಲ. ನಮ್ಮ ಜೀವನದ ಮೊದಲ 25 ವರ್ಷಗಳು ಏನು ಮಾಡುತ್ತೇವೆ, ಅದೇ ನಮ್ಮ ಮುಂದಿನ 75 ವರ್ಷ ನಾವು ಪಾಲಿಸಿಕೊಂಡು ಹೋಗುತ್ತೇವೆ. ಹೀಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಎಳವೆಯಲ್ಲೇ ಒಳ್ಳೆಯ ವಿಚಾರಗಳನ್ನು ತಿಳಿಹೇಳಬೇಕು ಎಸ್.ಆರ್.ಎಸ್ ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಅಭಿಪ್ರಾಯಪಟ್ಟರು. ಅವರು ಜ. […]

ಜ. 22 ರಿಂದ 26 ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಕ್ಷೇತ್ರದ ವಾರ್ಷಿಕ ಉತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ‘ನೀವು ನನಗೆ ಸಾಕ್ಷಿಗಳಾಗುವಿರಿ’ ಎಂಬ ವಿಷಯದೊಂದಿಗೆ ಜ. 22 ರಿಂದ 26 ರವರೆಗೆ ಜರಗಲಿದ್ದು ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ. ಜ. 22ರ ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ, ಜ. 23 ರಂದು ಬೆಳಿಗ್ಗೆ 10ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಯಿಲ್, ಜ. 24 […]

ಜ.8 ರಂದು ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ: ಸುನಿಲ್ ಕುಮಾರ್

ಜ.8 ರಂದು ಕಾರ್ಕಳದ ಮಿಯಾರಿನಲ್ಲಿ 19 ನೇ ವರ್ಷದ ಲವಕುಶ ಜೋಡುಕರೆ ಕಂಬಳ ನಡೆಯಲಿದ್ದು, ಅಂದು ನೂತನ ಸಭಾ ವೇದಿಕೆಯ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಮಿಯಾರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಸಭಾವೇದಿಕೆಯು ನಿರ್ಮಾಣವಾಗಿದ್ದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇದರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಸಚಿವರು ಮತ್ತು ಕೇಂದ್ರ […]