ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಪರಶುರಾಮ ಥೀಂ ಪಾರ್ಕ್ ಸಹಕಾರಿ: ಸಿಎಂ ಬೊಮ್ಮಾಯಿ

ಕಾರ್ಕಳ: ತಾಲೂಕಿನ ಬೈಲೂರಿನ ಉಮಿಕುಂಜ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ ​ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಉದ್ಘಾಟನೆ ಮಾಡಿ, ಪರಶುರಾಮನ ಬೃಹತ್ ಪ್ರತಿಮೆಯ ಮೂಲಕ ತುಳುನಾಡು ಬಂಗಾರದ ನಾಡಾಗಲಿ ಎಂದು ಶುಭ ಹಾರೈಸಿದರು. ಪರಶುರಾಮ್ ಥೀಂ ಪಾರ್ಕ್ಅನ್ನು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪರಶುರಾಮನ ಪ್ರತಿಮೆ, ಬಯಲು ರಂಗ ಮಂದಿರ ಆರ್ಟ್ ಗ್ಯಾಲರಿ, ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ. ಕಾರ್ಕಳದಲ್ಲಿ ಪ್ರತಿಷ್ಠಾಪಿಸುತ್ತಿರುವ ಈ ಪರಶುರಾಮನ ವಿಗ್ರಹ 33 ಅಡಿ ಎತ್ತರವಿದ್ದು, […]

ಪ್ರತಿಯೊಬ್ಬರಲ್ಲೂ ನಾವು ಭಾರತೀಯರೆಂಬ ಅಭಿಮಾನ ಇರಬೇಕು: ಐ.ಎನ್.ಎಸ್ ಕಮಾಂಡರ್ ಅಶ್ವಿನ್ ರಾವ್

ಕಾರ್ಕಳ: ದೇಶದ ನಾಗರಿಕನಾಗಿ ಸ್ವಯಂ ಪ್ರೇರಣೆಯಿಂದ ಜವಾಬ್ದಾರಿಗಳನ್ನು ವಹಿಸಿಕೊಂಡು ದೇಶದ ಏಳಿಗೆಗೆ ಕೈ ಜೋಡಿಸಬೇಕು. ದೇಶ ಅಂದ್ರೆ ನಾವು, ನಾವು ಅಂದ್ರೆ ದೇಶ ಎಂಬ ಭಾವ ಮೊಳಗಬೇಕು. ನಾನು ಭಾರತೀಯ ಎಂಬ ಹೆಮ್ಮೆ ಗರ್ವ, ಅಭಿಮಾನ ಇರಬೇಕೆಂದು ಕೊಚ್ಚಿಯ ಐ.ಎನ್.ಎಸ್. ಶಾರದಾ ಕಮಾಂಡರ್ ಅಶ್ವಿನ್.ಎಂ.ರಾವ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ 74 ನೇ ಗಣರಾಜ್ಯೋತ್ಸವದಲ್ಲಿ ಧ್ವಜಹಾರಿಸಿ ಮಾತನಾಡಿದರು. ಶಿಸ್ತುಬದ್ಧ ವಿದ್ಯಾರ್ಥಿ ಜೀವನವು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಜವಾಬ್ದಾರಿಯುತ ಮನಸ್ಥಿತಿಯು ಎಂತಹ ಪ್ರತಿಕೂಲ ಸ್ಥಿತಿಯನ್ನು […]

ಅತ್ತೂರು ಸಂತ ಲಾರೆನ್ಸ್ ಮೈನರ್ ಬೆಸಿಲಿಕಾ ವಾರ್ಷಿಕೋತ್ಸವ ಸಂಪನ್ನ

ಕಾರ್ಕಳ: ಐದು ದಿನಗಳ ಕಾಲ ನಡೆದ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾ ಅತ್ತೂರಿನ ವಾರ್ಷಿಕ ಹಬ್ಬವು ಜನವರಿ 26 ಗುರುವಾರದಂದು ಅದ್ಧೂರಿಯಾಗಿ ಸಂಪನ್ನಗೊಂಡಿತು. ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಡಾ.ಬರ್ನಾಡ್ ಮೊರಾಸ್ ಅವರು ಅಂತಿಮ ದಿನದ ಹಬ್ಬದ ಆಚರಣೆಗಳ ನೇತೃತ್ವ ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆ ಶಾಶ್ವತ ಸದ್ಗುಣಗಳು. ಇವುಗಳಿಂದ ನವ ಸಮಾಜ ನಿರ್ಮಾಣ ಸಾಧ್ಯ. ಕೌಟುಂಬಿಕ ಜೀವನದಲ್ಲೂ ನಮಗೆ ಇದು ಬೇಕು. ನಾವು ಶಾಂತಿ ಮತ್ತು ಪ್ರೀತಿಯಿಂದ ಬದುಕಿದಾಗ, ನಾವು ದೇವರನ್ನು ಸಾಕ್ಷಾತ್ಕರಿಸಬಹುದು ಎಂದು ಅವರು ಧರ್ಮಬೋಧನೆ […]

ಮುಂಡ್ಕೂರು: ಕಾರಿನೊಳಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ವ್ಯಕ್ತಿ ಆತ್ಮಹತ್ಯೆ

ಮುಂಡ್ಕೂರು: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಎಂಬಲ್ಲಿ ಗುರುವಾರ 54 ವರ್ಷದ ವ್ಯಕ್ತಿಯೊಬ್ಬರು ಸೀಮೆಎಣ್ಣೆ ಸುರಿದು ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ಕೃಷ್ಣ ಮೂಲ್ಯ ಎಂದು ಗುರುತಿಸಲಾಗಿದ್ದು, ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಬುಧವಾರ ಕೃಷ್ಣ ಅವರ ಸೊಸೆಯ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಮೃತರು ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ […]

ಕಾರ್ಕಳ: ಸಂಜೀವಿನಿ ರಾಷ್ಟ್ರಮಟ್ಟದ ಕರಕುಶಲ ವಸ್ತು ಪ್ರದರ್ಶನ-ಮಾರಾಟ ಮಳಿಗೆ ಉದ್ಘಾಟನೆ

ಕಾರ್ಕಳ :ಆಚಾರ-ವಿಚಾರ ಪದ್ಧತಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಒಂದು ವೇದಿಕೆಯಡಿ ಎಲ್ಲಾ ಪ್ರದೇಶಗಳ ವಸ್ತುಗಳು ಮತ್ತು ಉತ್ಪನ್ನಗಳನ್ನು ನೋಡುವ ಅವಕಾಶ ದೊರಕಿದೆ. ವಿವಿಧ ಜಿಲ್ಲೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದಿಂದ ಸಬಲೀಕರಣದ ಸಫಲತೆ ಫಲ ಕಂಡು ಬರುತ್ತಿದೆ. ಇಲ್ಲಿ ಒಂದು ರೀತಿಯಲ್ಲಿ ಭಾರತ ದರ್ಶನ ಆಗಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಭಾರತ ಸರಕಾರ-ಗಾಂಧೀ ಸಿಲ್ಕ್ ಬಜಾರ್, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ […]