ಪ್ರಸಾದ್ ಶೆಣೈ ಅವರ “ನೇರಳೆ ಐಸ್ ಕ್ರೀಂ” ಕೃತಿ ವೀರಲೋಕ ಪ್ರಕಾಶನದಿಂದ ಅದ್ದೂರಿ ಬಿಡುಗಡೆ

ಬೆಂಗಳೂರು: ಯುವ ಕತೆಗಾರ, ಕನ್ನಡನಾಡಿನ ಪ್ರತಿಷ್ಠಿತ ಟೊಟೋ ಪ್ರಶಸ್ತಿ ಪುರಸ್ಕೃತ ಬರಹಗಾರ ಕಾರ್ಕಳದ ಪ್ರಸಾದ್ ಶೆಣೈ ಆರ್ ಕೆ ಅವರ ಮೂರನೇ ಕೃತಿ “ನೇರಳೆ ಐಸ್ ಕ್ರೀಂ” ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮ ಸಾಹಿತ್ಯ ಯುಗಾದಿ ಭಾನುವಾರ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ , ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್, ವಿಮರ್ಶಕ ಬಸವರಾಜ್ ಸರಬದ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ವೀರಲೋಕದ ಪ್ರತಿಷ್ಠಾನದ ವೀರಕಪುತ್ರ ಶ್ರೀನಿವಾಸ […]
ಉಡುಪಿ ಜಿಲ್ಲೆಯಲ್ಲೂ ಪ್ಲಾಸ್ಟಿಕ್ ಫ್ಲೆಕ್ಸ್, ನಿಷೇಧಕ್ಕೆ ಹೆಚ್ಚಿತು ಒತ್ತಡ, ಕಾರ್ಕಳ, ಕುಂದಾಪುರದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳಿಗೆ ಲೆಕ್ಕವೇ ಇಲ್ಲ, ಪರಿಸರ ಸ್ನೇಹಿ ಬಟ್ಟೆ ಫ್ಲೆಕ್ಸ್ ಗಳಿಗೆ ಸಾರ್ವಜನಿಕರ ತಾಕೀತು

ಮಂಗಳೂರು ಮಹಾನಗರಪಾಲಿಕೆ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ನಿಷೇಧಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬೆನ್ನಲ್ಲಿಯೇ ಉಡುಪಿ ಜಿಲ್ಲೆಯಲ್ಲೂ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ನಿಷೇಧಿಸಬೇಕು ಎನ್ನುವ ಕೂಗು ಬಲವಾಗಿ ಎದ್ದಿದೆ. ಲೋಡುಗಟ್ಟಲೇ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ವಿಲೇವಾರಿಮಾಡದೇ ಅಲ್ಲಲ್ಲಿ ಎಸೆಯುವ ದೃಶ್ಯಗಳು ಕಾರ್ಕಳ, ಉಡುಪಿ, ಕುಂದಾಪುರ ಭಾಗಗಳಲ್ಲಿ ಅತೀಯಾಗಿ ಕಂಡುಬಂದಿರುವ ಕುರಿತು ಸಾರ್ವಜನಿಕ ದೂರುಗಳು ದಾಖಲಾಗಿದೆ. ಅಲ್ಲದೇ ಈ ಪ್ಲಾಸ್ಟಿಕ್ ಫ್ಲೆಕ್ಸ್ ಗಳೆ ಮಣ್ಣನ್ನು ಸೇರಿ, ನೀರನ್ನು ಸೇರಿ ಪರಿಸರವನ್ನು ಹಾನಿಗೊಳಿಸುದಷ್ಟೇ ಅಲ್ಲದೇ ಬರೋಬ್ಬರಿ 400 ವರ್ಷ […]
ಮಂಗಳೂರು-ಕಾರ್ಕಳ ರಸ್ತೆಗಿಳಿಯಿತು ಸರಕಾರಿ ಬಸ್ಸು: ಜನತೆಯಿಂದ ಭರ್ಜರಿ ಸ್ವಾಗತ: ಇಲ್ಲಿದೆ ಬಸ್ ವೇಳಾಪಟ್ಟಿ!

ಮಂಗಳೂರು-ಕಾರ್ಕಳ: ಕಾರ್ಕಳ-ಮಂಗಳೂರು ದಾರಿಯಲ್ಲಿ ಸರಕಾರಿ ಬಸ್ಸು ಓಡಾಡಬೇಕು ಎನ್ನುವುದು ಇಲ್ಲಿನ ಜನರ, ವಿದ್ಯಾರ್ಥಿಗಳ ಬಹು ವರ್ಷಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆ ಬಂದ ಮೇಲಂತೂ ಸರಕಾರಿ ಬಸ್ಸನ್ನು ಈ ದಾರಿಯಲ್ಲಿ ಬಿಡಲೇಬೇಕು ಎನ್ನುವ ಆಗ್ರಹ ಜಾಸ್ತಿಯಾಗಿತ್ತು. ಈಗ ಸರಕಾರಿ ಬಸ್ಸಿನ ಕನಸು ಈಡೇರಿದೆ. ಡಿ.12 ಗುರುವಾರದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.ಇಷ್ಟು ದಿನ ಖಾಸಗಿ ಬಸ್ ಗಳ ಒತ್ತಡದಿಂದ ಸರಕಾರಿ ಬಸ್ಸು ರಸ್ತೆಗಿಳಿಯದೇ ಜನರು ಸಮಸ್ಯೆ ಅನುಭವಿಸಿದ್ದರು. ಖಾಸಗಿ ಬಸ್ಸು ಮಾಲೀಕರು ಶಾಸಕರಿಗೆ, […]
ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕದಿಂದ ಕಾರ್ಯಕ್ರಮ

ಮುನಿಯಾಲು: ಗುರುವಾರದಂದು ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಯುನಿಸೆಫ್ ಸಹಭಾಗಿತ್ವದಲ್ಲಿ ‘ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳನ್ನು ಪಡೆಯಲು ಸಮುದಾಯಗಳಲ್ಲಿ ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಗಾಗಿ ಎನ್. ಎಸ್. ಎಸ್. ಸ್ವಯಂ ಸೇವಕರ ತೊಡಗಿಸಿಕೊಳ್ಳುವಿಕೆ ಯೋಜನೆ’ ಕಾರ್ಯಕ್ರಮ ನಡೆಯಿತು. ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಡಾ. ಸುದೀಪ ಇವರು ಎನ್. ಎಸ್. ಎಸ್. ಮಹತ್ವ ಮತ್ತು ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸಿದರು. […]
ಕುಕ್ಕುಂದೂರು : ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕುಕ್ಕುಂದೂರು : ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯ ಜೋಡುರಸ್ತೆಯಲ್ಲಿ ಸುಮಾರು 6.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ಚರಂಡಿ, ಅಲಂಕಾರಿಕಾ ಬೀದಿ ದೀಪಗಳ ಅಳವಡಿಕೆ ಹಾಗೂ ಎರಡು ಬದಿಯ ಪಾದಾಚಾರಿ ಮಾರ್ಗಕ್ಕೆ ಇಂಟರ್ ಲಾಕ್ ಅಳವಡಿಕೆಯ ಕಾಮಗಾರಿಗೆ ಎ. 25 ರಂದು ಬೆಳಿಗ್ಗೆ 8 ಗಂಟೆಗೆ ಸಚಿವ ವಿ. ಸುನಿಲ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಪರಿಕಲ್ಪನೆಯಡಿ ಕ್ಷೇತ್ರಾದ್ಯಂತ […]