ಬ್ರಹ್ಮಾವರ: ಕರ್ಜೆ ಸರಕಾರಿ ಪ.ಪೂ ಕಾಲೇಜಿಗೆ ನೂರು ಶೇಕಡಾ ಶೇ 100 ಫಲಿತಾಂಶ
ಬ್ರಹ್ಮಾವರ: ತಾಲೂಕಿನ ಕರ್ಜೆ ಸರಕಾರಿ ಪ.ಪೂ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗದಿಂದ 12 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದಿಂದ 30 ವಿದ್ಯಾರ್ಥಿಗಳು ಒಟ್ಟು 42 ವಿದ್ಯಾರ್ಥಿಗಳು ಹಾಜರಾಗಿದ್ದು ಇಬ್ಬರು ವಿಶಿಷ್ಟ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.