ವಿರಾಟ್ ಕೊಹ್ಲಿ ಅಭಿಮಾನಿಯ ಕ್ರಿಕೆಟ್ ಕೌಶಲ್ಯ ವೈರಲ್: ಯುವ ಆಟಗಾರ್ತಿ ಮಕ್ಸೂಮಾಗೆ ಲಡಾಖ್ ಆಡಳಿತದ ಬೆಂಬಲ
ಲಡಾಖ್: ಇತ್ತೀಚೆಗೆ ಕಾರ್ಗಿಲ್‌ನ ಕಕ್ಸರ್ ಹೈಸ್ಕೂಲ್‌ನ 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಎನ್ನುವ ವಿದ್ಯಾರ್ಥಿನಿಯು ಕ್ರಿಕೆಟ್ ಆಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಲಡಾಖ್ ಆಡಳಿತವು ಕಾರ್ಗಿಲ್‌ನ ಕಕ್ಸರ್‌ನ ಯುವ ಕ್ರಿಕೆಟ್ ಆಟಗಾರ್ತಿ ಮಕ್ಸೂಮಾ ಅವರ ಕ್ರಿಕೆಟ್ ಪ್ರತಿಭೆ ಮತ್ತು ಅವರ ಆಕಾಂಕ್ಷೆಗಳಿಗೆ ಬೆಂಬಲವನ್ನು ನೀಡಿದೆ. ಈ ವೀಡಿಯೊದಲ್ಲಿ ಆಕೆ ಕ್ರಿಕೆಟ್‌ನ ಮೇಲಿನ ತನ್ನ ಉತ್ಸಾಹದ ಬಗ್ಗೆ ಮಾತನಾಡುತ್ತಾಳೆ. ತನ್ನ ಮನೆಯಲ್ಲಿ ತನ್ನ ತಂದೆಯಿಂದ ಮತ್ತು ಶಾಲೆಯಲ್ಲಿ ಶಿಕ್ಷಕರಿಂದ ಪಡೆದ ಬೆಂಬಲ ಮತ್ತು […]