ಉಡುಪಿ: ಜುಲೈ 27ರಂದು ಕಾರ್ಗಿಲ್ ಯುದ್ಧಕ್ಕೆ 20 ವರ್ಷ- ವಿಶೇಷ ಕಾರ್ಯಕ್ರಮ

ಉಡುಪಿ: ಕಾರ್ಗಿಲ್ ಯುದ್ದ  ಜು. 27ರಂದು 20 ವರ್ಷ ತುಂಬಲಿದ್ದು ಈ ಸವಿ ನೆನೆಪಿಗೆ, ಸಂಚಲನ ಸ್ವಯಂ ಸೇವಾ ಸಂಸ್ಥೆಯು ಉನ್ನತಿ ಕ್ಯಾರಿಯರ್ ಅಕಾಡೆಮಿ ಸಹಯೋಗದೊಂದಿಗೆ ನಿರ್ಮಿತಿ ಕೇಂದ್ರ ಕಚೇರಿ (ಬಯಲು ರಂಗ ವೇದಿಕೆ) ಇಲ್ಲಿ ಬೆಳಿಗ್ಗೆ 8 ರಿಂದ 9.30 ರ ವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಣಿಪಾಲ ಹೆಸರಿನ ಮೂಲ ‘ಮಣ್ಣಪಳ್ಳ ಕೆರೆ’ ದಂಡೆಯಲ್ಲಿ  527 ಹುತಾತ್ಮ ಯೋಧರ  ಹೆಸರಿನಲ್ಲಿ 527 ಗಿಡಗಳನ್ನು ನೆಡುವ ಕಾರ್ಯಕ್ರಮ ಇದೆ ಎಂದು ಪ್ರಕಟನೆ ತಿಳಿಸಿದೆ.