ಕರಾವಳಿಯಲ್ಲಿ ಅಬ್ಬರದ ಮಳೆ: ವಿವಿಧೆಡೆ ಹಾನಿ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಮಂಗಳವಾರದಿಂದ ಕರಾವಳಿಯಾದ್ಯಂತ ಧಾರಕಾರ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಬಿರುಸಾದ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಪುತ್ತೂರು ಹಾಗೂ ಮೂಡಬಿದಿರೆ ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮಂಗಳೂರಿನ ಹೊರವಲಯ ಆಕಾಶಭವನದಲ್ಲಿ ಭೂಕುಸಿತ ಉಂಟಾಗಿ ಮನೆಗೆ ಹಾನಿಯಾಗಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಶಾಲಾ ಶೌಚಾಲಯ ಕಟ್ಟಡದ ಮೇಲೆ ಮರಬಿದ್ದು, […]

ಸಸಿಹಿತ್ಲು: ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

ಮಂಗಳೂರು: ಸಮುದ್ರಕ್ಕೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್ ನಲ್ಲಿ ಭಾನುವಾರ ಸಂಭವಿಸಿದೆ. ಸ್ನಾನಕ್ಕಿಳಿದ ವೇಳೆ ಘಟನೆ ನಡೆದಿದ್ದು, ಬಜ್ಪೆ ನಿವಾಸಿ ಸುಜಿತ್ (32), ಕಾವೂರಿನ ಗುರುಪ್ರಸಾದ್ (28) ಮೃತಪಟ್ಟಿದ್ದಾರೆ. ಇನ್ನಿಬ್ಬರು ನೀರುಪಾಲಾಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅದರಲ್ಲಿ ಒರ್ವನ ಸ್ಥಿತಿ ಗಂಭೀರವಾಗಿದೆ. ಸಮೀಪದಲ್ಲಿ ಆಯೋಜಿಸಿದ ‘ಕೆಸರ್ಡೊಂಜಿ ದಿನ’ ಕಾರ್ಯಕ್ರಮದ ಬಳಿಕ ಯುವಕರು ಸ್ನಾನಕ್ಕೆಂದು ಸಮುದ್ರಕ್ಕೆ ತೆರಳಿದ್ದರು. ಮೂಲ್ಕಿ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರಾವಳಿಗೆ ವರುಣನ ಕೃಪೆ, ತುಂಬಿ ಹರಿಯುತ್ತಿರುವ ನೇತ್ರಾವತಿ… ಕಡಲ್ಕೊರೆತದಿಂದ ತತ್ತರಿಸುತ್ತಿರುವ‌ ಕರಾವಳಿ

ಮಂಗಳೂರು: ನೀರಿಲ್ಲದೇ ಕಂಗೆಟ್ಟಿದ್ದ ಕರಾವಳಿಯಲ್ಲಿ ಕಡೆಗೂ ವರುಣ ದೇವ ಕೃಪೆ ತೋರಿದ್ದಾನೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ನೀರಿಲ್ಲದೇ ಒಣಗಿದ್ದ ನೇತ್ರಾವತಿ ನದಿ ತುಂಬಿ‌ ಹರಿಯುತ್ತಿದೆ. ಆದರೆ ಕೆಲವೆಡೆ ಮಳೆಯಿಂದಾಗಿ ಗುಡ್ಡ ಕುಸಿದಂತ ಅವಾಂತರ ಸಂಭವಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡು ಕಡಲ್ಕೊರೆತ ಉಂಟಾಗಿ ಕಡಲ ತೀರದ ಮನೆಗಳು ಅಪಾಯದ ಅಂಚಿನಲ್ಲಿವೆ. ಈ ಅತೀ‌ಹೆಚ್ಚು ಮಳೆ ಬೀಳುವ ಕರಾವಳಿಯಲ್ಲಿ ಈ ಬಾರಿ ನೀರಿಗಾಗಿ ಆಹಾಕಾರ ಶುರುವಾಗಿತ್ತು. ಶಾಲಾ ಕಾಲೇಜುಗಳಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳ […]

ತುರ್ತು ಸಂದರ್ಭದಲ್ಲಿ ಸನ್ನದ್ದರಿರಿ: ಕರಾವಳಿ ಕಾವಲು ಪೊಲೀಸ್‍ಗೆ ಸೂಚನೆ

ಉಡುಪಿ:  ಇತ್ತೀಚೆಗೆ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಹಿನ್ನಲೆಯಲ್ಲಿ , ಕರಾವಳಿ ಕಾವಲು ಪೊಲೀಸರಿಂದ ಸಮುದ್ರಗಸ್ತು ತೀವ್ರಗೊಳಿಸಿದ್ದು, ಈ ಹಿನ್ನಲೆಯಲ್ಲಿ ಎ.ಎಮ್.ಪ್ರಸಾದ್ ಡಿಜಿಪಿ ಐಎಸ್‍ಡಿ ಹಾಗೂ ಸಿ.ಹೆಚ್ ಪ್ರತಾಪರೆಡ್ಡಿ, ಎಡಿಜಿಪಿ ಐಎಸ್‍ಡಿ ಬೆಂಗಳೂರು ರವರು , ಉಡುಪಿ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಕರಾವಳಿಯ ಸಮುದ್ರದಲ್ಲಿ ಇಂಟರ್‍ಸೆಪ್ಟರ್ ಬೋಟ್‍ನಲ್ಲಿ ಪೆಟ್ರೋಲಿಂಗ್ ಮಾಡಿದ ಅವರು, ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ , ಕರಾವಳಿ ಕಾವಲು ಪೊಲೀಸ್‍ವತಿಯಿಂದ , ಕರ್ನಾಟಕ ಕರಾವಳಿಯ  ಮಂಗಳೂರಿನಿಂದ ಕಾರವಾರದತನಕ ಬಿಗಿ ಭದ್ರತೆ, […]