ಕಾಪು: ಬಸ್ ಢಿಕ್ಕಿ, ಶಾಲಾ ವಿದ್ಯಾರ್ಥಿನಿ ಗಂಭೀರ
ಕಾಪು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಶಾಲಾ ಬಾಲಕಿ ಗಂಭೀರ ಗಾಯಗೊಂಡ ಘಟನೆ ಮಾ.11 ನಡೆದಿದೆ. ಕಾಪು ಮಹಾದೇವಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ವರ್ಷಿತಾ ಶೇರ್ವೆಗಾರ (13) ಗಾಯಾಳು ವಿದ್ಯಾರ್ಥಿನಿ. ಶನಿವಾರ ಬೆಳಗ್ಗೆ ಶಾಲೆಗೆ ಬರುತ್ತಿದ್ದ ಆಕೆ ರಾಷ್ಟ್ರೀಯ ಹೆದ್ದಾರಿ 66ರ ಮಂದಾರ ಹೊಟೇಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.ಬಾಲಕಿಯ ತಲೆಗೆ ಗಂಭೀರ ಏಟಾಗಿದ್ದು ಗಂಭೀರ ಗಾಯಗೊಂಡಿರುವ […]