ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ವತಿಯಿಂದ ವೃದ್ದೆಯ ಬಾಳಿಗೆ ದೊರಕಿತು ನೆಮ್ಮದಿಯ ಸೂರು ‘ಗೃಹಲಕ್ಷ್ಮಿ’!

ಕಾಪು: ಪೆರ್ಡೂರು ಗ್ರಾಮದ ಬಾಳೆಬೈಲು ಕಾಲನಿಯ ನಿವಾಸಿ ಗುಲಾಬಿ ಶೇರಿಗಾರ್ 76ರ ವಯಸ್ಸಿನ ಹಿರಿಯ ಜೀವಿ. ಗಂಡ, ಮಕ್ಕಳು ಬಂಧು-ಬಾಂಧವರೆಂಬ ಯಾವ ಕೌಟುಂಬಿಕ ಕೊಂಡಿಗಳೇ ಇಲ್ಲದ ಬದುಕು ಸವೆಸುತ್ತಿರುವ ಒಂಟಿ ಜೀವ. ಕೆಲ ವರ್ಷಗಳ ಹಿಂದೇ ಮಾನವೀಯ ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಕೊಡಮಾಡಿದ ಐದು ಸೆಂಟ್ಸ್ ಜಾಗದಲ್ಲಿ ಪುಟ್ಟ ಮನೆಯನ್ನು ಕಟ್ಟಿಕೊಂಡು ಹೇಗೂ ಬದುಕು ನಡೆಸುತ್ತಿದ್ದರು. ಆದರೆ ಮಳೆ-ಗಾಳಿಗೆ ತೋಯ್ದ ಆ ಪುಟ್ಟ ಬಿಡಾರ ಒಂದು ದಿನ ಧರೆಗುರುಳಿತು. ಒಂಟಿ ಜೀವ ಗುಲಾಬಿಯವರ ಬದುಕು ಬೀದಿಗೆ ಬಿದ್ದಿತು. […]