ಕಾಪು: ಮೂರು ಕರುಗಳಿಗೆ ಜನ್ಮನೀಡಿದ ಹಸು
ಕಾಪು: ತಾಲ್ಲೂಕಿನ ಮಜೂರಿನ ಸಾನದ ಮನೆಯಲ್ಲಿ ಹಸುವೊಂದು ಇಂದು ಮೂರು ಕರುಗಳಿಗೆ ಜನ್ಮನೀಡಿದ ಘಟನೆ ಭಾರೀ ಸಂಚಲನ ಮೂಡಿಸಿದೆ. ಕಾಕಾತಾಳಿಯ ಎಂಬಂತೆ ಶ್ರೀಕೃಷ್ಣಜನ್ಮಾಷ್ಟಮಿಯಂದೆ ಹಸು ಮೂರು ಕರುಗಳಿಗೆ ಜನ್ಮನೀಡಿದ್ದು, ಭಾರೀ ಕೌತುಕಕ್ಕೆ ಕಾರಣವಾಗಿದೆ. ಹಸು ಮತ್ತು ಮೂರು ಕರುಗಳು ಆರೋಗ್ಯವಾಗಿವೆ. ಇದೀಗ ಹಸು ಮತ್ತು ಕರುವನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ ಎಂದು ತಿಳಿದುಬಂದಿದೆ.