ಕನ್ನಡ ಮಾಲೂಮ್ ನಹೀಗೆ ಪರಿಹಾರವೇನು?

ನಾನು ಅನ್ಯಭಾಷಿಕಳಾಗಿ,ಅನ್ಯ ರಾಜ್ಯದವಳಾಗಿ ಕನ್ನಡವನ್ನು ಮಾತನಾಡಲು,ಬರೆಯಲು,ಅನುಭವದ ಆಧಾರದ ಮೇಲೆ ಕರ್ನಾಟಕ ಸರ್ಕಾರ, ಕನ್ನಡ ಸಂಘಗಳು ಮತ್ತು ಕನ್ನಡ ಪ್ರೇಮಿಗಳ ಜೊತೆ ನನ್ನ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು, ಬಯಸುತ್ತೇನೆ. ಪೂಜಾ ಗಾಂಧಿ ,ಪ್ರಸಿದ್ಧ ಚಿತ್ರ ನಟಿ —– ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ವರದಿಯಾದಂತೆ, ಕರ್ನಾಟಕ ಸರ್ಕಾರದ ಗೌರವಾನ್ವಿತ ಗೃಹ ಸಚಿವರಾದ ಡಾ ಜಿ. ಪರಮೇಶ್ವರವರು “ಚಾವುಂಡರಾಯ ದತ್ತಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿರುವ ಶೇಕಡಾ 60 ರಷ್ಟು ಜನರಿಗೆ ಕನ್ನಡ ಬರದಿರುವ ಬಗ್ಗೆ ತಮ್ಮ ಕಳವಳ […]