ಕರಾವಳಿ ತೀರದಲ್ಲಿ ಸಾಗುವ ವೈವಿಧ್ಯ ದೃಶ್ಯಾವಳಿಯ ‘ಆರ’: ಜುಲೈ 28 ರಂದು ಬೆಳ್ಳಿತೆರೆಗೆ; ಕಾಡಿನ ಕಾಡುವ ಕಥೆಯಿದು…

ಉಡುಪಿ: ಕರಾವಳಿ ತೀರದ ಸುಂದರ ಸೊಗಡಿನ ಕಥಾ ಹಂದರದ ಕನ್ನಡ ಚಲನಚಿತ್ರ “ಆರ”ದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ. ಆರ , ಮುಗ್ಧ ಜೀವನದಲ್ಲಿ ಸುಂದರ ದೈವಿಕ ಹಸ್ತಕ್ಷೇಪದ ದೇವರ ನಾಟಕದ ಕಥಾನಕವನ್ನು ಹೊಂದಿದೆ. ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ ಮತ್ತು ಸುಜಾತಾ ಚಡಗ, ಚಂದ್ರಶೇಖರ್ ಮತ್ತು ರೋಹಿತ್ ನಿರ್ಮಿಸಿದ್ದಾರೆ. ರೋಹಿತ್, ದೀಪಿಕಾ ಆರಾಧ್ಯ, ಆನಂದ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಹಾಡುಗಳನ್ನು ಗಿರೀಶ್ ಹೋತೂರ್ ಸಂಯೋಜಿಸಿದ್ದಾರೆ. ಅಜಿತ್ ಕೇಶವ, ರೋಹಿತ್, ರಾಕೇಶ್, ಮನು ದೇವರಹಳ್ಳಿ ಸಾಹಿತ್ಯ ಬರೆದಿದ್ದಾರೆ. […]

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಡ್ಡ ಪ್ರವೀಣನ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆ

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಿರ್ಮಾಣದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ನಟನೆಯ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೇವರಾಜ್.ಆರ್ ನಿರ್ಮಾಣ, ಡಿ ಕ್ರಿಯೇಷನ್ಸ್ ಬ್ಯಾನರ್ ನಡಿ ಮೂಡಿಬಂದಿರುವ ಚಿತ್ರಕ್ಕೆ ವಿಕಾಸ್ ಪುಷ್ಪಗಿರಿ ಚಿತ್ರಕಥೆ ಮತ್ತು ನಿರ್ದೇಶನವಿದೆ. ಶಂಕರ್ ರಾಮನ್.ಎಸ್ ಸಂಭಾಷಣೆ, ಶಂಕರ್ ರಾಮನ್.ಎಸ್ & ವಿಕಾಸ್ ಪುಷ್ಪಗಿರಿ ಚಿತ್ರಕಥೆ, ಸತೀಶ್ ಆರ್ಯನ್ ಸಂಗೀತ, ಶೋಯಭ್ […]

ಸದ್ದಿಲ್ಲದೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ

ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ, ರಮೇಶ್ ಅರವಿಂದ್ ನಟನೆಯ ಆಕಾಶ್ ಶ್ರೀವತ್ಸ ನಿರ್ದೇಶಿಸಿ ಸಂಕಲಿಸಿರುವ ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗಿದ್ದರೂ ಸದ್ದು ಮಾಡುತ್ತಿದೆ. ಶಿವಾಜಿ ಸುರತ್ಕಲ್ ಭಾಗ 1-ರಣಗಿರಿ ರಹಸ್ಯ ಕೂಡಾ ಚಿತ್ರರಸಿಕರಿಗೆ ಮೋಡಿ ಮಾಡಿತ್ತು. ಅಬ್ಬರದ ಪ್ರಚಾರ, ಗಿಮಿಕ್ ಗಳಿಲ್ಲದೆ ಕೇವಲ ಕಥಾ ಹಂದರದಿಂದಲೇ ಶಿವಾಜಿ ಜನರ ಮನಗೆಲ್ಲುತ್ತಿದ್ದಾನೆ. ಇಬ್ಬರು ಹುಡುಗಿಯರು ಕ್ರೂರವಾಗಿ ಸಾವನ್ನಪ್ಪಿದ್ದು ಶಿವಾಜಿ ಜೊತೆಯಲ್ಲಿ ಆತನ ನಂಬಿಕಸ್ಥ ಸಹಾಯಕ ಗೋವಿಂದು ಈ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕಥಾ ಹಂದರವಿದೆ. […]

ಇತಿಹಾಸ ಸೃಷ್ಟಿಸಿದ ಕಾಂತಾರ: 15 ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ರೂ ಗಳಿಕೆ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾಗಳ ಪೈಕಿ ಕಾಂತಾರವೂ ಒಂದಾಗಿದ್ದು, ಸಿನಿಮಾವು 15 ದಿನಗಳಲ್ಲಿ ವಿಶ್ವದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದೆ. ಭಾರತದ ನಿವ್ವಳ ಸಂಗ್ರಹ 78.14 ಕೋಟಿ ರೂಗಳಾಗಿವೆ. ಇದಕ್ಕೂ ಮುಂಚೆ ಕನ್ನಡದ 5 ಚಲನಚಿತ್ರಗಳು ಈ ಇತಿಹಾಸ ನಿರ್ಮಿಸಿದ್ದು, ಕಾಂತಾರ ಸದ್ಯ 6 ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 1207 ಕೋಟಿ ರೂ ಗಳಿಸುವ ಮೂಲಕ ಹೊಂಬಾಳೆ ಬ್ಯಾನರ್ಸ್ ನ ಯಶ್ ಅಭಿನಯದ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಇದರ ಹಿಂದಿನ […]

25 ದಿನಗಳಲ್ಲಿ ಚಾರ್ಲಿ ಕಲೆಕ್ಷನ್ 150 ಕೋಟಿ: 5 ಶೇ. ಭಾರತೀಯ ತಳಿಯ ನಾಯಿಗಳ ರಕ್ಷಿಸುವ ಎನ್.ಜಿ.ಒಗಳಿಗೆಂದ ನಿರ್ಮಾಪಕ ರಕ್ಷಿತ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸತೊಂದು ಸಂಚಲವನ್ನು ಹುಟ್ಟು ಹಾಕಿದ 777ಚಾರ್ಲಿ ಚಿತ್ರವು 25 ದಿನಗಳಲ್ಲಿ ದೇಶಾದ್ಯಂತ 450 ಸ್ಕ್ರೀನ್ ಗಳಲ್ಲಿ, ಎಲ್ಲಾ ಭಾಷೆಗಳನ್ನು ಒಟ್ಟು ಸೇರಿಸಿ ಸರಿ ಸುಮಾರು 150 ಕೋಟಿ ರೂಗಳನ್ನು ಗಲ್ಲಾಪೆಟ್ಟಿಗೆಯಿಂದ ಬಾಚಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ-ನಟ ರಕ್ಷಿತ್ ಶೆಟ್ಟಿ, ಚಾರ್ಲಿ ಯಶಸ್ಸಿನಿಂದ ಇಡೀ ತಂಡ ಸಂಪೂರ್ಣವಾಗಿ ಖುಷಿಯಾಗಿದೆ. ಇದು ಬರಿಯ ಚಿತ್ರವಲ್ಲ, ಇದು ನಮ್ಮೆಲ್ಲರ ಜೀವನದ ಮೂರು ವರ್ಷದ ಅನುಭವ ಕಥನ. ಕೆಜಿಎಫ್-1 ಮತ್ತು ಕೆಜಿಎಫ್- 2 ಚಿತ್ರವು ಇಡೀ […]