ತುಳುನಾಡಿನಲ್ಲಿ ಕುದಿ ಕಂಬಳ ಋತು ಪ್ರಾರಂಭ: ಮೂಡಬಿದಿರೆಯಲ್ಲಿ ಚಾಲನೆ
ಕಾರ್ಕಳ: ತುಳುನಾಡಿನ ಜನಪದ ಕ್ರೀಡೆ ಕಂಬಳ ಋತು ಪ್ರಾರಂಭಕ್ಕೂ ಮೊದಲು ಕೋಣಗಳನ್ನು ತಯಾರುಗೊಳಿಸುವ ಕುದಿ ಕಂಬಳಕ್ಕೆ (ತರಬೇತಿ ಕಂಬಳಕ್ಕೆ) ಭಾನುವಾರ ಮೂಡುಬಿದಿರೆಯ ಕೋಟಿ-ಚೆನ್ನಯ ಕಂಬಳಕರೆಯಲ್ಲಿ ಚಾಲನೆ ನೀಡಲಾಯಿತು. ಕಂಬಳ ಅಕಾಡೆಮಿಯ ಸಂಚಾಲಕ ಗುಣಾಪಾಲ ಕಡಂಬ ಅವರು ಚಾಲನೆ ನೀಡಿದರು. ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ರಂಜಿತ್ ತೋಡಾರು ಮತ್ತಿತರರು ಉಪಸ್ಥಿತರಿದ್ದರು. ಮಾಸ್ಕ್ ವಿತರಿಸಿ ಜಾಗೃತಿ : ಮೂಡಬಿದಿರೆ, ಬಾರಾಡಿಬೀಡು, ಮಿಯ್ಯಾರು ಮೂರು ಕಡೆಗಳಲ್ಲಿ ಕುದಿ ಕಂಬಳ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿಗಾಗಿ ಮಾಸ್ಕ್ ಕೂಡ ವಿತರಣೆ […]