ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ: ಅ.23ರಂದು ಮಹಾನವಮಿ, ಅ.24ರಂದು ವಿಜಯೋತ್ಸವ ಆಚರಣೆ
ಸಿದ್ದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.23 ಸೋಮವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರ ಮೆರವಣಿಗೆ (ರಥ ಬೀದಿ ಮತ್ತು ರಾಜಬೀದಿ), ಸಂಜೆ ಗಂಟೆ 5:30 ರಿಂದ 7:15 ರ ತನಕ ನೃತ್ಯಾಂಗಣ ನಾಟ್ಯಾಲಯ ಸಿದ್ದಾಪುರ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಅ.24 ಮಂಗಳವಾರ ಉದಯ ಪೂರ್ವ 6.05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ […]