ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ ಬಹುಕೋಟಿ ವಂಚನೆ ಪ್ರಕರಣ: ಸ್ಪೀಕರ್ ಗೆ ಮನವಿ ಸಲ್ಲಿಸಿದ ಸಂತ್ರಸ್ತರು

ಉಡುಪಿ: ಕಳೆದ ಡಿಸೆಂಬರ್ ನಲ್ಲಿ ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಎಂಬ ಸೊಸೈಟಿಯಲ್ಲಿ ಬಹುಕೋಟಿ ಹಗರಣ ನಡೆದಿರುವ ಘಟನೆ ವರದಿಯಾಗಿತ್ತು. ಸಂಸ್ಥೆಯು ತನ್ನ ಠೇವಣಿದಾರ ಗ್ರಾಹಕರಿಗೆ ಬಡ್ಡಿ ಅಥವಾ ಅವಧಿ ಮುಗಿದ ಠೇವಣಿ ಮೊಬಲಗನ್ನು ಹಿಂತಿರುಗಿಸದೆ ಕೋಟಿಗಟ್ಟಲೆ ಆರ್ಥಿಕ ವಂಚನೆ ನಡೆಸಿದ್ದ ಬಗ್ಗೆ ಜಿಲ್ಲೆಯಾದ್ಯಂತ ವರದಿಯಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆ ಹಾಗೂ ಸೆನ್ ಠಾಣೆಗಳಲ್ಲಿ ದೂರು ದಾಖಲಿಸಿ ಎಫ್.ಐ.ಆರ್ ದಾಖಲಿಸಲಾಗಿತ್ತು. ಇದರ ಪರಿಣಾಮವಾಗಿ ಸೆನ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಸಂಸ್ಥೆಯ […]