ಕಾಂಗ್ರೆಸ್ ಮುಖಂಡ ಕಮಲಾಕ್ಷ  ಪೂಜಾರಿ ನಿಧನ

ಮಣಿಪಾಲ: ಮಣಿಪಾಲ ಸರಳೇಬೆಟ್ಟುವಿನ ವಿಜಯನಗರ ನಿವಾಸಿ, ಕಾಂಗ್ರೆಸ್ ಮುಖಂಡ ಕಮಲಾಕ್ಷ ಪೂಜಾರಿ(60) ಹೃದಯಾಘಾತದಿಂದ ಡಿ.12ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ರಿಕ್ಷಾಚಾಲಕರಾಗಿದ್ದು, ಇಂದು ಶಾಲಾ ಮಕ್ಕಳನ್ನು ರಿಕ್ಷಾದಲ್ಲಿ ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಬಿಟ್ಟು, ಅಲ್ಲಿಂದ ಬಾಡಿಗೆಗೆ ಹೊರಡುವ ವೇಳೆ ರಿಕ್ಷಾದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಸರಳೇಬೆಟ್ಟು ವಾರ್ಡಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಇವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವರಾದ […]