ಕಲ್ಯಾಣಪುರ: ಬಾಲಮಾರುತಿ ವ್ಯಾಯಾಮ ಶಾಲೆಯ ರಜತ ಸಂಭ್ರಮ

ಕಲ್ಯಾಣಪುರ ಶ್ರೀ ಬಾಲಮಾರುತಿ ವ್ಯಾಯಾಮ ಶಾಲೆಯ ರಜತ ಸಂಭ್ರಮ ನಡೆಯಿತು. ರಜತ ಸಂಭ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.  ಉದ್ಯಮಿಗಳಾದ ಪ್ರಸಾದ್ ಕಾಂಚನ್, ಜೇರಿ ವಿನ್ಸೆಂಟ್ ಡಯಾಸ್ ಮೊದಲಾದವರು ಇದ್ದರು.