ಕೈರಬೆಟ್ಟು, ಕಲ್ಯಾ ಊರ ಜನರಿಗೆ ನೆರವಾದ ಕೈರಬೆಟ್ಟು, ಕಲ್ಕಾರ್ ಯುವಕರು: ದೈನಂದಿನ ಬಳಕೆ ಸಾಮಾಗ್ರಿ ವಿತರಣೆ

ಕಾರ್ಕಳ:  ಕೈರಬೆಟ್ಟು ವಾರ್ಡಿನಲ್ಲಿ ಕೈರಬೆಟ್ಟು, ಕಲ್ಕಾರ್ ಯುವಕರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಕೈರಬಿಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 250 ಮನೆಗಳಿಗೆ ದೈನಂದಿನ ಬಳಕೆಗೆ ಬೇಕಾದ ಸಾಮಗ್ರಿ ಹಾಗೂ ಆಹಾರ ಧಾನ್ಯಗಳ ನೆರವು ನೀಡಲಾಯಿತು. ಕಲ್ಯ ಗ್ರಾಮದ ಕುಂಟಾಡಿ ಹಾಗೂ ಹಾಳೆಕಟ್ಟೆ ವಾರ್ಡಿಗೂ ದೈನಂದಿನ ಬಳಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸೇವಾ ಅಭಿಯಾನದಲ್ಲಿ ಊರಿನ ಸೇವಾ ಕಾರ್ಯಕರ್ತರು, ಯುವಕರು ಭಾಗವಹಿಸಿದ್ದರು.