ಕಲ್ಲಂಗಳ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ

ಉಡುಪಿ: ಶ್ರೀ ವಾಸುಕೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಲಂಗಳ ಇಲ್ಲಿ ಡಿ.2ರಂದು ಸೋಮವಾರ ವಾರ್ಷಿಕ ಷಷ್ಠಿ ಮಹೋತ್ಸವ, ರಥೋತ್ಸವ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ‌ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಡಿ. 3ರಂದು‌ ಮಂಗಳವಾರ ನಾಗಮಂಡಲ, ಡಿ. 4ರಂದು ಬುಧವಾರ ಲಕ್ಷ ಪುಷ್ಪಾರ್ಚನೆ, ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ ಎಂದು‌ ದೇವಸ್ಥಾನದ ಪ್ರಕಟನೆ ತಿಳಿಸಿದೆ.