ಕೇರಳದ ‘ಕಲಾಮೇಳ್ತ್’ ಕಲಾ ಪ್ರಕಾರದಲ್ಲಿ ಮೂಡಿಬಂದ ‘ಭದ್ರಕಾಳಿ’

ಮಣಿಪಾಲ: ಕೇರಳದ ಕಲಾಪ್ರಕಾರವಾದ ‘ಕಲಾಮೇಳ್ತ್’ ಇದರ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸವನ್ನು ತ್ರಿಶೂರಿನ ಹಿರಿಯ ಕಲಾವಿದ ವೇಣುಗೋಪಾಲ್ ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಶನಿವಾರ ಸಂಜೆ ನಡೆಸಿಕೊಟ್ಟರು. ಬಿಳಿ, ಹಸಿರು, ಕಪ್ಪು, ಹಳದಿ, ಕಡು ಕಂದು- ಈ ಐದು ನೈಸರ್ಗಿಕ ಬಣ್ಣಗಳನ್ನು ಬಳಸಿ, ‘ಭದ್ರಕಾಳಿ’ಯ ಚಿತ್ರವನ್ನು ಮೂಡಿಸುವುದರ ಮೂಲಕ ತಮ್ಮ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು. ಕೇರಳದ ದೇವಸ್ಥಾನಗಳಲ್ಲಿ ಪ್ರಚಲಿತವಾಗಿರುವ ಈ ಕಲೆಯ ಸಂದರ್ಭ ಹಾಗೂ ಒಟ್ಟು ಸ್ವರೂಪವನ್ನು ವಿವರಿಸಿದರು. ನಂತರ […]