ಕಾಜಾರಗುತ್ತು ಗೆಳೆಯರ ಬಳಗದ ವಾರ್ಷಿಕೋತ್ಸವ: ಬಡ ಅಂಗವಿಕಲರಿಗೆ ಆರ್ಥಿಕ ನೆರವು

ಉಡುಪಿ: ಕಾಜಾರಗುತ್ತು ಗೆಳೆಯರ ಬಳಗ ಸಂಘದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು. ಬಡ ಅಂಗವಿಕಲ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲು ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ಗೆಳೆಯರ ಬಳಗ ಪ್ರತಿವರ್ಷ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ. ಉದ್ಯಮಿ ಅಶ್ವಿನ್‌ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಾಧು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಭಾಸ್ಕರ ಪೂಜಾರಿ ಮಾಂಬೆಟ್ಟು ಅವರಿಗೆ 20 […]