ಭದೇರ್ವಾ ಪಟ್ಟಣದ ವಾಸುಕಿ ನಾಗ ದೇವಸ್ಥಾನ ವಿಧ್ವಂಸ ಪ್ರಕರಣ: ಜಮ್ಮುವಿನಲ್ಲಿ ಬೃಹತ್ ಪ್ರತಿಭಟನೆ

ಜಮ್ಮು: ದೋಡಾ ಜಿಲ್ಲೆಯ ಭದೇರ್ವಾ ಪಟ್ಟಣದ ವಾಸುಕಿ ನಾಗ ದೇವಾಲಯವನ್ನು ಅಪವಿತ್ರಗೊಳಿಸಿದ ಒಂದು ದಿನದ ನಂತರ ಸೋಮವಾರ ಜಮ್ಮುವಿನಲ್ಲಿ ಬೃಹತ್ ಪ್ರತಿಭಟನೆ ಭುಗಿಲೆದ್ದಿದೆ. ಹಿಂದೂ ಸಮುದಾಯಕ್ಕೆ ಸೇರಿದ ಪ್ರತಿಭಟನಾಕಾರರು “ಹಿಂದೂ ದೇವಾಲಯ ಧ್ವಂಸಗೊಳಿಸುವುದನ್ನು ನಿಲ್ಲಿಸಿ” ಎಂದು ಬರೆಯಲಾದ ಫಲಕವನ್ನು ಹಿಡಿದುಕೊಂಡು ಧರಣಿ ನಡೆಸಿದ್ದಾರೆ. ಧರ್ಮಾರ್ಥ ಟ್ರಸ್ಟ್‌ನ ಒಡೆತನದಲ್ಲಿರುವ ಭದೇರ್ವಾ ಪಟ್ಟಣದ ಕೈಲಾಸ ಕುಂಡದ ವಾಸುಕಿ ನಾಗ ದೇಗುಲದಲ್ಲಿ ಶ್ರೀ ವಾಸುಕಿ ನಾಗರಾಜ ಮಹಾರಾಜರ ವಿಗ್ರಹಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಪಟ್ಟಣದ ಹಲವೆಡೆ ರಸ್ತೆ […]