ಮೋದಿ ಪ್ರಧಾನಿಯಾಗುತ್ತಾರೆ ಎನ್ನುವ ಅತೀ ವಿಶ್ವಾಸವೂ ಒಳ್ಳೆಯದಲ್ಲ: ಕುಂದಾಪುರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ

ಕುಂದಾಪುರ: ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸ ಎಲ್ಲರಲ್ಲೂ ಇದೆ. ಆದರೆ ಅತಿಯಾದ ಆತ್ಮ ವಿಶ್ವಾಸ ಒಳ್ಳೇದಲ್ಲ. ಹಿಂದೆ ಅತಿಯಾದ ಆತ್ಮವಿಶ್ವಾಸದಿಂದಾಗಿ ವಾಜಪೇಯಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದು ನಾವು ನಿರೀಕ್ಷಿಸಿ ಸುಮ್ಮನಿದ್ದೆವು. ಆದರೆ ವಾಜಪೇಯಿಯವರ ಸಾಧನೆಗಳನ್ನು ಜನರಿಗೆ ಸರಿಯಾಗಿ ತಿಳಿಸಲು ಎಡವಿದೆವು. ಆದರೆ ಈಗ ಹಾಗಾಗಬಾರದು. ನಾವೆಲ್ಲರೂ ಸೇರಿ ಮೋದಿಯವರ ಜನಪರ ಕಾರ್ಯಕ್ರಮಗಳನ್ನು ಪ್ರತೀ ಹಳ್ಳಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ  ಹೇಳಿದ್ದಾರೆ. ಕಾಂಗ್ರೆಸ್ ಅರವತ್ತು ವರ್ಷ ಮಾಡದ ಸಾಧನೆಯನ್ನು ನರೇಂದ್ರ ಮೋದಿಯವರು ಐದೇ ವರ್ಷದಲ್ಲಿ […]