ಸ್ಯಾಕ್ಸೋಫೋನ್ ಗಾರುಡಿಗನಿಗೆ ಶ್ರದ್ಧಾಂಜಲಿ; ಕದ್ರಿ ಗೋಪಾಲ್ ನಾಥ್ ನೈಜ ನಾದಯೋಗಿ: ಪ್ರೊ.ಅರವಿಂದ ಹೆಬ್ಬಾರ್
ಉಡುಪಿ: ಅಪೂರ್ವವಾದ ಕಲಾತಪಸ್ಸು, ಪ್ರಯೋಗಶೀಲತೆಗಳಿಂದ ಸ್ಯಾಕ್ಸೋಫೋನ್ ನಂಥಹ ಪಾಶ್ಚಾತ್ಯ ವಾದ್ಯಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ ಬಾಲಮುರಳೀಕೃಷ್ಣರಂಥಹ ನೂರಾರು ಮಹಾನ್ ಕಲಾವಿದರುಗಳನ್ನೇ ಬೆರಗುಗೊಳಿಸಿದ್ದು, ಮಾತ್ರವಲ್ಲದೇ ಜಾಗತಿಕವಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಕದ್ರಿ ಗೋಪಾಲನಾಥರು ನೈಜ ನಾದಯೋಗಿ ಎಂದು ಹಿರಿಯ ಸಂಗೀತ ತಜ್ಞ ಪ್ರೊ. ಅರವಿಂದ ಹೆಬ್ಬಾರ್ ಹೇಳಿದರು. ರಾಗಧನ ಉಡುಪಿ ಇದರ ವತಿಯಿಂದ ನಡೆದ ವಿದ್ವಾನ್ ಕದ್ರಿ ಗೋಪಾಲ್ ನಾಥ್ ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ. ಹೆಬ್ಬಾರ್ ಕದ್ರಿಯವರ ಕಲಾ ಬದುಕು ಹಾಗೂ ಸಿದ್ಧಿ ಸಾಧನೆಯ ಬಗೆಗೆ ಮಾತನಾಡಿ […]