ಸಂಗೀತ ದೇವಿಯ ಪಾದ ಸೇರಿದ ನಾದ ಲೋಕದ ಸರದಾರ ಕದ್ರಿ ಗೋಪಾಲನಾಥ್

ಮಂಗಳೂರು: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್  ಅವರು ಶುಕ್ರವಾರ ಬೆಳಿಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಂಗಳೂರು ಮೂಲದ ಕದ್ರಿ ಗೋಪಾಲನಾಥ್ ಕೆಲದಿನಗಳಿಂದ ಅಸೌಖ್ಯದಿಂದ ಎ.ಜೆ.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕದ್ರಿ ಗೋಪಾಲನಾಥ್, ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ತಂದೆ. ಮಂಗಳೂರು ಪದವಿನಂಗಡಿ ಮನೆಯಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು  ತಿಳಿದುಬಂದಿದೆ. ಕದ್ರಿ ಗೋಪಾಲನಾಥ್ 1950ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ […]