ಕಡಿಯಾಳಿ ಮಹಿಷ ಮರ್ದಿನಿ ದೇವಿಯ ತುಳು ಭಕ್ತಿ ಗೀತೆ ‘ಕರಿಯ ಕಲ್ಲ ಬಿಂಬ’ ಬಿಡುಗಡೆ
ಉಡುಪಿ: ಕುಸುಮ್ಯ ಕಾರ್ಕಳ ಸಾಹಿತ್ಯದಲ್ಲಿ ರಾಜೇಶ್ ಮುಡಿಪು ಹಾಗೂ ಪೂಜಾ ಸನಿಲ್ ಸುಮಧುರ ಕಂಠದಲ್ಲಿ ಮೂಡಿ ಬಂದಿರುವ ಕಡಿಯಾಳಿ ಮಹಿಷ ಮರ್ದಿನಿ ದೇವಿ ಸ್ತುತಿಯ ತುಳು ಭಕ್ತಿ ಗೀತೆ ‘ಕರಿಯ ಕಲ್ಲ ಬಿಂಬ’ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕಡೆಶಿವಾಲಯ ಕ್ರಿಯೇಷನ್ ಸಂಕಲನ ಹೊಂದಿರುವ ಗೀತೆಗೆ ನರೇಶ್ ವಿಡಿಯೋಗ್ರಫಿ ಮಾಡಿದ್ದಾರೆ. ಹಾಡಿಗೆ ಮನೀಶ್ ಪೂಜಾರಿ ಕುರ್ಕಾಲ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯು ಬೆಂಬಲ ನೀಡಿದೆ.