ಕಡೆಕಾರು ಗ್ರಾ.ಪಂ: 100% ಆಸ್ತಿ ತೆರಿಗೆ ಸಂಗ್ರಹಣೆ

ಉಡುಪಿ: ಉಡುಪಿ ತಾಲೂಕು ಕಡೆಕಾರು ಗ್ರಾಮ ಪಂಚಾಯತಿಯು 2021-22 ನೇ ಸಾಲಿನಲ್ಲಿ 42,05,604 ರೂ. ಆಸ್ತಿ ತೆರಿಗೆ ಸಂಗ್ರಹಣೆ ಮಾಡಿ, ಪ್ರತಿಶತ ನೂರರಷ್ಟು ಸಾಧನೆ ಮಾಡಿದ್ದು, ತೆರಿಗೆ ಸಂಗ್ರಹಕ್ಕೆ ಶ್ರಮಿಸಿದ ಕಡೆಕಾರು ಗ್ರಾಮ ಪಂಚಾಯತ್‌ನ ಬಿಲ್ ಕಲೆಕ್ಟರ್ ಶ್ರೀಧರ್ ಅವರನ್ನು ಇತ್ತೀಚೆಗೆ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಸನ್ಮಾನಿಸಿದರು.