ಭಾರೀ ಮಳೆಗೆ ಕುಸಿದು ಬಿತ್ತು ಕಬ್ಬಿನಾಲೆ ಮತ್ತಾವು ಸೇತುವೆ: ದಾರಿ ಕಾಣದೇ ಕಂಗಾಲಾದ್ರು ಗ್ರಾಮಸ್ಥರು!
ವರದಿ -ರಾಮ್ ಅಜೆಕಾರು ಕಾರ್ಕಳ ಕಾರ್ಕಳ: ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಮುದ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿ ಯ ಕಬ್ಬಿನಾಲೆ ಮತ್ತಾವು ಮರದ ಸೇತುವೆಯು ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡೇ ಹೋಗಿದೆ. ವರುಣನ ಆರ್ಭಟ ಕ್ಕೆ ಸಿಲುಕಿದ ಮರದ ಸೇತುವೆಯ ದಿಮ್ಮಿಗಳು ಚೆಲ್ಲಾಪಿಲ್ಲಿಯಾಗಿ ಕೊಚ್ಚಿಹೋಗಿದ್ದು ಜನರು ಅತ್ತಿತ್ತ ಸಾಗಲಾಗದೆ ಕಂಗಾಲಾಗಿದ್ದಾರೆ. ನದಿ ನೀರಿನ ಮಟ್ಟ ದಿನನಿತ್ಯ ಹೆಚ್ಚುತ್ತಿದೆ. ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಮರದ ಸೇತುವೆ ಆಧಾರಕೊಂಡಿಯಾಗಿತ್ತು. ಸರಿ ಸುಮಾರು ನೂರಕ್ಕೂ ಹೆಚ್ಚು ಜನರು ಮತ್ತಾವು ಪರಿಸರದಲ್ಲಿ ವಾಸಿಸುತ್ತಿದ್ದು […]