ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಭಾನುವಾರದಂದು ಕೋಟಾ ಕ್ಕೆ ಆಗಮನ

ಉಡುಪಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ) ರಾಜ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ, ಜೂನ್ 12 ರಂದು ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಕೋಟಕ್ಕೆ ಆಗಮಿಸಲಿದ್ದಾರೆ. ಕೋಟ ಮಾಂಗಲ್ಯ ಮಂದಿರದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೋಟ ಹೋಬಳಿಯ ಯುವ ಘಟಕ ಉದ್ಘಾಟನೆ, ವಿಶ್ವಕರ್ಮ ಸಮಾಜದ ವಿವಿಧ ಕ್ಷೇತ್ರಗಳ‌ ಸಾಧಕರ ಸನ್ಮಾನ, ಎಸ್.ಎಸ್.ಎಲ್.ಸಿ ಯಲ್ಲಿ 600 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಯುವಘಟಕಾಧ್ಯಕ್ಷ ಶ್ರೀನಿವಾಸ ಮಳವಳ್ಳಿ ಉಪಸ್ಥಿತರಿರಲಿದ್ದಾರೆ. […]