ಫೆ.2: ಕಟಪಾಡಿಬೀಡು ಮೂಡು-ಪಡು ಜೋಡುಕರೆ ಕಂಬಳ
ಉಡುಪಿ: ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಕಟಪಾಡಿಬೀಡು ಮೂಡು-ಪಡು ಜೋಡುಕರೆ ಕಂಬಳ ಫೆ. 2ರಿಂದ ನಡೆಯಲಿದೆ. ಪೂರ್ವಹ್ನ 10.30ಕ್ಕೆ ಕಂಬಳ ಉದ್ಘಾಟನೆಗೊಳ್ಳಲಿದ್ದು, ಕಂಬಳ ವ್ಯವಸ್ಥಾಪಕ ಕಟಪಾಡಿಬೀಡು ಮಹಾಬಲ ಹೆಗ್ಡೆ ಚಾಲನೆ ನೀಡಲಿದ್ದಾರೆ. ಸಂಜೆ 6.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ವಿ.ಸುನಿಲ್ ಕುಮಾರ್, ಡಾ. ಭರತ್ ಶೆಟ್ಟಿ, ರಾಜೇಶ್ ನಾೈಕ್, ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.