ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯಡಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಕೃತಕಾಂಗ ಜೋಡಣೆ (ಪಿ ಎಂಡ್ ಓ) ಅಭಿಯಂತರರ -1 ಹುದ್ದೆಗೆ, ಪಿ ಆಂಡ್ ಓ ಎಂಜಿನಿಯರಿಂಗ್ ಪದವಿ / ಡಿಪ್ಲೋಮಾ ವಿದ್ಯಾರ್ಹತೆ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಅನುಭವ ಹೊಂದಿರುವವರು ಹಾಗೂ ಇಯರ್ ಮೋಲ್ಡ್ ಟೆಕ್ನೀಷಿಯನ್ (ಕಿವಿ ಅಚ್ಚು ತಂತ್ರಜ್ಞ) ಹುದ್ದೆಗೆ ಇಯರ್ ಮೋಲ್ಡ್ ಟೆಕ್ನೀಷಿಯನ್ […]
ಉಡುಪಿ: ಆಗಸ್ಟ್ 14 ರಂದು ಮನೋವೈದ್ಯರ ಹುದ್ದೆಗಾಗಿ ನೇರ ಸಂದರ್ಶನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ-ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಮನೋವೈದ್ಯರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಆಗಸ್ಟ್ 14 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಮನೋವೈದ್ಯ ಶಾಸ್ತ್ರದಲ್ಲಿ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿ ಅಥವಾ ಮನೋವೈದ್ಯ ಶಾಸ್ತ್ರದಲ್ಲಿ ಡಿ.ಎನ್.ಬಿ ಪದವಿ ಅಥವಾ ಎಂ.ಸಿ.ಐ ನಿಂದ ಗುರುತಿಸಲ್ಪಟ್ಟ ಸಂಸ್ಥೆಯಿಂದ ಡಿ.ಪಿ.ಎಮ್ ಪದವಿ ಹೊಂದಿರುವ ಹಾಗೂ […]
ಆಗಸ್ಟ್ 5 ರಂದು ಮನೋವೈದ್ಯರ ಹುದ್ದೆಗಾಗಿ ನೇರ ಸಂದರ್ಶನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ-ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಮನೋವೈದ್ಯರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಆಗಸ್ಟ್ 5 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸುಮೇರು ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿ ಉದ್ಯೋಗಾವಕಾಶ

ಉಡುಪಿ: ಇಲ್ಲಿನ ಸುಮೇರು ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿಆರ್ಕಿಟೆಕ್ಟ್, ಬಿಇ-ಸಿವಿಲ್, ಡಿಪ್ಲೊಮಾ-ಸಿವಿಲ್, ಆಟೋಕ್ಯಾಡ್ ಮತ್ತು 3ಡಿ ಡ್ರಾಫ್ಟಿಂಗ್ ನಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಿವೆ. ವಿಳಾಸ: 1 ನೇ ಮಹಡಿ, ಮಾಡರ್ನ್ ಟವರ್, ಕಿದಿಯೂರು ಹೋಟೇಲ್ ಬಳಿ, ಉಡುಪಿ. ನಿಮ್ಮ ಸಿವಿ ಗಳನ್ನು 9632901600 ಅಥವಾ [email protected] ಗೆ ಕಳುಹಿಸಿ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಸಂಘಟಕರ ಹುದ್ದೆ ಖಾಲಿ

ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಸಿ ವೃಂದದ ಕಲ್ಯಾಣ ಸಂಘಟಕರು-14 ಹುದ್ದೆಗಳ ನೇಮಕಾತಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಭೂ ಸೇನೆಯ ಜೆ.ಸಿ.ಓ ರ‍್ಯಾಂಕ್ ಹಾಗೂ ವಾಯುಪಡೆ ಮತ್ತು ನೌಕಾಪಡೆಯ ತತ್ಸಮಾನ ರ‍್ಯಾಂಕ್‌ನಿಂದ ಸೇವಾ ನಿವೃತ್ತಿ ಹೊಂದಿರುವ ಮಾಜಿ ಸೈನಿಕರು ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 20 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ದೂರವಾಣಿ ಸಂಖ್ಯೆ : 080-25589459 ಅನ್ನು […]