ಬಾಲಭವನ ಕಚೇರಿ ಸಹಾಯಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಜಿಲ್ಲಾ ಬಾಲಭವನದಲ್ಲಿ ಖಾಲಿ ಇರುವ ಕಚೇರಿ ಸಹಾಯಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ ಅಥವಾ ಮೇಲ್ಪಟ್ಟು ವಿದ್ಯಾರ್ಹತೆಯೊಂದಿಗೆ, ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಮೇ 11 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574972 ಅನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.29: ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ: ಶಾಂತಾ ಎಲೆಕ್ಟ್ರಿಕಲ್ಸ್ ಮತ್ತು ಇಂಜಿನಿರ್ಸ್ ಪ್ರೈ.ಲಿ, ಶ್ರೀ ವಿನಾಯಕ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಕಂಪೆನಿ ಮತ್ತು ಕೋಟೆ ಮನೆ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಏಪ್ರಿಲ್ 29 ರಂದು ಬೆಳಗ್ಗೆ 9.45 ರಿಂದ ಮಣಿಪಾಲದ ಉದ್ಯೋಗ ವಿನಿಮಯ ಕಛೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಐ.ಟಿ.ಐ ಡಿಪ್ಲೋಮಾ, ಬಿ.ಎ, ಬಿ.ಎಡ್, ಎನ್.ಟಿ.ಟಿ ಹಾಗೂ ಇತರೆ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅಂಕಪಟ್ಟಿ, ರೆಸ್ಯೂಮ್ ಹಾಗೂ ಆಧಾರ್ ಕಾರ್ಡಿನ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. […]

ಉದ್ಯೋಗಾವಕಾಶ: ಏ 26 ರಂದು ಖಾಸಗಿ ಕಂಪನಿಗಳ ನೇರ ಸಂದರ್ಶನ

  ಮಂಗಳೂರು: ಏಪ್ರಿಲ್ 26 ರ ಬೆಳಗ್ಗೆ 10 ಘಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪನಿಗಳ ನೇರ ಸಂದರ್ಶನವು ನಡೆಯಲಿದೆ. ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿಯಲ್ಲಿ (ಬಿಇ ಮತ್ತು ಬಿಸಿಎ ಹೊರತುಪಡಿಸಿ) ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ಮಾಹಿತಿಯೊಂದಿಗೆ ನಗರದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಾಜರಾಗಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಜುಲೈ 15 ರಂದು ಉದ್ಯೋಗ ಮೇಳ

ಉಡುಪಿ, ಜುಲೈ 11: ಕೌಶಲ್ಯಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ ಉದ್ಯೋಗಮೇಳ ಕಾರ್ಯಕ್ರಮವು ಜುಲೈ 15 ರಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನಡೆಯಲಿದೆ. ಉದ್ಯೋಗಮೇಳದ ಅಂಗವಾಗಿ ವೃತ್ತಿ ಮಾರ್ಗದರ್ಶನ ತರಬೇತಿ ಮತ್ತು ಸಂದರ್ಶನ ಪೂರ್ವ ತಯಾರಿಯ ಬಗ್ಗೆ ಕಾರ್ಯಾಗಾರವು ಜುಲೈ 12 ರಂದು ಬೆಳಗ್ಗೆ 10 […]

ಜೂನ್ 21-22: 11ನೇ ಆಳ್ವಾಸ್‌ ಪ್ರಗತಿ- ಬೃಹತ್‌ ಉದ್ಯೋಗ ಮೇಳ,  ದೇಶದ ವಿವಿಧ ಪ್ರತಿಷ್ಟಿತ ಕಂಪೆನಿಗಳು ಭಾಗಿ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ’11ನೇ ಆಳ್ವಾಸ್‌ ಪ್ರಗತಿ-ಬೃಹತ್‌ ಉದ್ಯೋಗ ಮೇಳ’ ಜೂನ್. 21 ಮತ್ತು 22ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಈ ಸಂಬಂಧ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿ ನಡೆಸಿ‌ ಮಾಹಿತಿ ನೀಡಿದರು. ಆಳ್ವಾಸ್‌ ಪ್ರಗತಿ-2019ರ ಆವೃತ್ತಿಯಲ್ಲಿ ಹಲವು‌ ರೀತಿಯಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಪದವಿ ಮತ್ತು ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್‌, ಆರ್ಟ್ಸ್, ಕಾಮರ್ಸ್‌ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್‌ ಸೈನ್ಸ್‌, ನರ್ಸಿಂಗ್‌, […]