ಜ್ಞಾನಸುಧಾ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಕಾರ್ಕಳ: ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಸಚಿನ್ ಎಸ್. ಕೋಟ್ಯಾನ್ ಇವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಟ್ಸ್ ಆಫ್ ಇಂಡಿಯಾ ನಡೆಸುವ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ತೇರ್ಗಡೆ ಹೊಂದಿದ್ದಾರೆ. ಇವರು ನಿಟ್ಟೆಯ ಶ್ರೀ ಸುಭಾಸ್ ಕೋಟ್ಯಾನ್ ಹಾಗೂ ವನಿತಾ ಕೋಟ್ಯಾನ್ ಇವರ ಸುಪುತ್ರ. ಇವರ ಸಾಧನೆಗೆ ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರ ಅಭಿನಂದನೆ ಸಲ್ಲಿಸಿದೆ.