ಕಾರ್ಕಳ:ಜ್ಞಾನಸುಧಾ ವಿದ್ಯಾರ್ಥಿನಿ: ಐ.ಡಿ.ಎಸ್.ಸಿ ಕ್ಯಾಂಪ್‍ಗೆ ಆಯ್ಕೆ

ಕಾರ್ಕಳ: ಮೂಡಬಿದರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ 18-ಕರ್ನಾಟಕ ಬೆಟಲೀಯನ್ ಆಯೋಜಿಸಿದ ಐ.ಡಿ.ಎಸ್.ಸಿ ಕ್ಯಾಂಪ್‍ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ ಕೆಡೆಟ್ ದಿಶಾ ಎಂ.ಬಿ.ಜಿ ಅವರು, ಮುಂದೆ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಗೋವ ಡೈರಕ್ಟರೇಟ್ ನಡೆಸಲ್ಪಡುವ ಐ.ಡಿ.ಎಸ್.ಸಿ ಕ್ಯಾಂಪ್ಗೆ ಆಯ್ಕೆಗೊಂಡಿರುತ್ತಾರೆ. ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಕಾಲೇಜಿನ ಎನ್.ಸಿ.ಸಿ ಮಾರ್ಗದರ್ಶಕ  ಸುಮಿತ್ ಅಭಿನಂದಿಸಿದ್ದಾರೆ.