ಉಡುಪಿ ಜ್ಞಾನಸುಧಾ ಕಾಲೇಜಿನಲ್ಲಿ ಉಚಿತ ನೀಟ್ ಲಾಂಗ್ ಟರ್ಮ್ ತರಬೇತಿ
ಉಡುಪಿ: ಕಡಿಯಾಳಿ ನಾಗಬನ ಬಳಿಯ ಜ್ಞನಸುಧಾ ಕ್ಯಾಂಪಸ್ ನಲ್ಲಿ ನೀಟ್ 2023 ಲಾಂಗ್ ಟರ್ಮ್ ತರಬೇತಿ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೀಟ್-2022ರಲ್ಲಿ 450ಕ್ಕಿಂತ ಹೆಚ್ಚು ಅಂಕ ಪಡೆದಿದ್ದು ನೀಟ್-2023 ಬರೆಯುವ ಆಸಕ್ತ ವಿದ್ಯಾರ್ಥಿಗಳು ನೀಟ್ ಲಾಂಗ್ ಟರ್ಮ್ ಉಚಿತ ತರಬೇತಿಗೆ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನೀಟ್ 2022ರಲ್ಲಿ19 ವಿದ್ಯಾರ್ಥಿಗಳು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಮೂಲಕ ಉಡುಪಿ ಜ್ಞಾನಸುಧಾದಲ್ಲಿ ನೀಟ್‌ಲಾಂಗ್ ಟರ್ಮ್‌ಗೆ ದಾಖಲಾತಿ ಹೊಂದಿದ್ದರು. ಇದರಲ್ಲಿ 10 ವಿದ್ಯಾರ್ಥಿಗಳು ಉಚಿತ […]
ನೀಟ್ ಫಲಿತಾಂಶ : ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ
ಕಾರ್ಕಳ : ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕ್ಷೇತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾದ 9 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 76 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ. ಅಖಿಲ್.ಯು.ವಾಗ್ಲೆ 99.87ಪರ್ಸಂಟೈಲ್ ನೊಂದಿಗೆ 665 ಅಂಕ, ಪ್ರಜ್ವಲ್ ಜೆ.ಪಿ. 655 ಅಂಕ, ಆರ್ಯ.ಪಿ ಶೆಟ್ಟಿ 640 ಅಂಕ, ಅನಿರುದ್ಧ್ ಭಟ್ 640 ಅಂಕ, ರಮ್ಯ ಎಸ್.ಗೌಡ 630 ಅಂಕ, ಕಾರ್ತಿಕ್ ಬ್ಯಾಕೊಡ್ 626 ಅಂಕ, ಶರ್ಮದಾ 613 ಅಂಕ, ಆರ್ಯನ್.ವಿದ್ಯಾಧರ್.ಶೆಟ್ಟಿ 610 ಅಂಕ, […]
ಜೆಇಇ ಮೈನ್ ನಲ್ಲಿ ಜ್ಞಾನಸುಧಾ ಕಾಲೇಜಿನ 5 ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್
ಕಾರ್ಕಳ: ರಾಷ್ಟ್ರಮಟ್ಟದಲ್ಲಿ ನಡೆದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ 2ನೇ ಫೇಸ್ ಪರೀಕ್ಷೆಯ ಬಳಿಕ ಅಂತಿಮ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್‌ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಸ್ತುತಿ ಎಸ್ 99.60 ಪರ್ಸಂಟೈಲ್(ಜನರಲ್ ಮೆರಿಟ್ 3719ನೇ ರ‍್ಯಾಂಕ್, ಒಬಿಸಿ 691ನೇ ರ‍್ಯಾಂಕ್), ಅಖಿಲ್.ಯು.ವಾಗ್ಲೆ99.56 ಪರ್ಸಂಟೈಲ್(ಜನರಲ್ ಮೆರಿಟ್ 4050ನೇ ರ‍್ಯಾಂಕ್, ಒಬಿಸಿ 776ನೇ ರ‍್ಯಾಂಕ್), ಚಿರಾಗ್.ಜಿ.ಎಸ್ 99.35 ಪರ್ಸಂಟೈಲ್(ಜನರಲ್ ಮೆರಿಟ್ 5977ನೇ ರ‍್ಯಾಂಕ್, ಒಬಿಸಿ 1220ನೇ ರ‍್ಯಾಂಕ್), ಪ್ರಜ್ವಲ್.ಜೆ.ಪಟಗಾರ್ 99.24 ಪರ್ಸಂಟೈಲ್(ಜನರಲ್ ಮೆರಿಟ್ […]
ಜ್ಞಾನಸುಧಾ ಕಾಲೇಜು: ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನೆ
ಕಾರ್ಕಳ: ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅರಿವು ಮೂಡಲು ಎನ್ನೆಸ್ಸೆಸ್ ತನ್ನದೇ ಆದ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿಯ ಪ್ರಾಂಶುಪಾಲರಾದ ಡಾ. ಪ್ರಸಾದ್ ರಾವ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡುತ್ತಾ ನಾನು ನನ್ನದು ಎಂಬ ಸ್ವಾರ್ಥಪರತೆಯ ಮನೋಭಾವ ಎಲ್ಲೆಡೆ ಮನೆಮಾಡಿರುವಾಗ ಶೈಕ್ಷಣಿಕ ಜೀವನದ ಎನ್ನೆಸ್ಸೆಸ್ ಸಹಬಾಳ್ವೆ, ‘ನನಗಲ್ಲ ನಿನಗೆ’ ಎಂಬ ಕಲ್ಪನೆ ಕೊಟ್ಟು ಶ್ರಮದ […]
ಜ್ಞಾನಸುಧಾ ಕಾಲೇಜಿನಲ್ಲಿ ಮಾಸಿಕ ಮೌಲಿಕ ಸರಣಿ ‘ಮೌಲ್ಯಸುಧಾ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ
ಗಣಿತ ನಗರ: ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಬದುಕಿದ್ದು ಮೂವತ್ತೊಂಬತ್ತು ವರ್ಷವಾದರೂ, ಅವರು ಮನುಕುಲಕ್ಕೆ ನೀಡಿದ ಸಂದೇಶ ಸಾರ್ವಕಾಲಿಕವಾದುದು ಎಂದು ಶ್ರೀ ಮುನಿರಾಜ ರೆಂಜಾಳ ಹೇಳಿದರು. ಅವರು ಗಣಿತ ನಗರದ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾದ ಮಾಸಿಕ ಕಾರ್ಯಕ್ರಮ ಸರಣಿ ಮಾಲಿಕೆ ‘ಮೌಲ್ಯ ಸುಧಾ’ವನ್ನು ಉದ್ಘಾಟಿಸಿ, ‘ಸ್ವಾಮಿ ವಿವೇಕಾನಂದರ ಜೀವನಾದರ್ಶಗಳು’ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರಪಿತ ಗಾಂಧೀಜಿ ಕೂಡಾ ಸ್ವಾಮಿ […]