ಬಿಹಾರ: ಜೀತನ್ ರಾಮ್ ಮಾಂಝಿ ಪಕ್ಷ ಎನ್‌ಡಿಎ ಮೈತ್ರಿ ಒಕ್ಕೂಟಕ್ಕೆ ಸೇರ್ಪಡೆ
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ನಡೆಯುವ ಸಾಧ್ಯತೆಗಳಿದ್ದು, ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಬಿಹಾರ ರಾಜಕೀಯದಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ನೇತೃತ್ವದ ಎಚ್‌ಎಎಂ(ಎಸ್) ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಡಿಎ ಮೈತ್ರಿ ಒಕ್ಕೂಟದೊಂದಿಗೆ ಸೇರ್ಪಡೆಯಾಗಲಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಪಕ್ಷದ ಮುಖಂಡ ಮಾಂಝಿ ಅವರು ಗುರುವಾರ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ವಕ್ತಾರ ಡ್ಯಾನಿಷ್ ರಿಜ್ವಾನ್ […]