ನಟಿ ಸುಮಲತಾ ವಿರುದ್ಧ ಕೀಳುಮಟ್ಟದ ಭಾಷೆ ಪ್ರಯೋಗ ವಿಚಾರ, ರೇವಣ್ಣ ಕೂಡಲೇ ಕ್ಷಮೆ ಕೋರಬೇಕು: ಶೋಭಾ
ಉಡುಪಿ: ನಟಿ ಸುಮಲತಾ ಅಂಬರೀಶ್ ಅವರ ಬಗ್ಗೆ ಸಚಿವ ರೇವಣ್ಣ ಹಗುರ ಮಾತನಾಡಿರುವುದು ಅಕ್ಷಮ್ಯ. ಕೀಳುಮಟ್ಟ ಭಾಷೆ ಬಳಸಿ ಮಹಿಳಾ ದಿನಾಚರಣೆಯಂದೇ ಓರ್ವ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಇಂದು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಂಡ ಸತ್ತವರು ರಾಜಕೀಯಕ್ಕೆ ಬರಬಾರದೆಂದು ಕಾನೂನಿಲ್ಲ. ಗಂಡನನ್ನು ಕಳೆದುಕೊಂಡು ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡಬಾರದು. ರೇವಣ್ಣ ಓರ್ವ ಜವಾಬ್ದಾರಿಯುತ ರಾಜಕಾರಣಿಯಾಗಿ ಹೀಗೆ ಮಾತನಾಡಿರುವುದು ಸರಿಯಲ್ಲ. ಅವರು ಕೂಡಲೇ ಸುಮಲತಾ ಅವರ ಕ್ಷಮೆ ಕೋರಬೇಕು ಎಂದರು. ಸದ್ಯ ಸುಮಲತಾ ಕಾಂಗ್ರೆಸ್ […]