ಸಂಘ-ಸಂಸ್ಥೆಯ ಬೆಳವಣಿಗೆಗೆ ಹಿರಿಯರ ಮಾರ್ಗದರ್ಶನ ಮುಖ್ಯ: ಜಯರಾಮ್ ಆಚಾರ್ಯ
ಉಡುಪಿ: ಹಿರಿಯರ ಅನುಭವ, ಮಾರ್ಗದರ್ಶನದೊಂದಿಗೆ ಮುನ್ನಡೆದಲ್ಲಿ ಸಂಘ ಸಂಸ್ಥೆಗಳ ಏಳ್ಗೆ ಸಾಧ್ಯ ಎಂದು ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ. ಜಯರಾಮ್ ಆಚಾರ್ಯ ಹೇಳಿದರು. ಚಿಟ್ಟಾಡಿ ವಿಶ್ವಕರ್ಮ ಸೇವಾ ಸಂಘದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಯಾವುದೇ ಸಂಘ ಸಂಸ್ಥೆಗಳ ಬೆಳವಣಿಗೆ ಆಗಬೇಕಿದ್ದರೆ ಅಲ್ಲಿ ಒಗ್ಗಟ್ಟು ಮುಖ್ಯ. ಕೇವಲ ಪದಾಧಿಕಾರಿಗಳು ಮಾತ್ರ ಜವಾಬ್ದಾರಿ ತೆಗೆದುಕೊಳ್ಳದೆ ಸದಸ್ಯರೆಲ್ಲರೂ ಒಟ್ಟಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾದರಿ ಸಂಸ್ಥೆಯನ್ನಾಗಿ […]