ಕಾರ್ಕಳ: ಸಮಾಜ ಸೇವಕ, ಧಾರ್ಮಿಕ ಮುಖಂಡ ಜಯರಾಮ್ ನಾಯಕ್ ನಿಧನ

ಕಾರ್ಕಳ: ಬೈಲಗಂಡಿಯ ಸಮಾಜ ಸೇವಕ ಮತ್ತು ಧಾರ್ಮಿಕ ಮುಖಂಡ ಜಯರಾಮ್ ನಾಯಕ್ (63 ವರ್ಷ) ಇಂದು ಮುಂಜಾನೆ ಕಾರ್ಕಳದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ, ಮಗಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಕಾರ್ಪೊರೇಷನ್ ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ದೊಂಡೇರಂಗಡಿ ಶ್ರೀ ರಾಮ ಮಂದಿರದ ಅಧ್ಯಕ್ಷರಾಗಿದ್ದರು. 3 ವರ್ಷಗಳ ಹಿಂದೆ ನಡೆದ ಮಂದಿರದ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಕಾರ್ಕಳ ಶ್ರೀ […]