ನೀತಿ ಸಂಹಿತೆ ಉಲ್ಲಂಘನೆ- ಉದ್ಯಾವರ ಜಯಲಕ್ಷ್ಮಿ ಟೆಕ್ಸ್ ಟೈಲ್ ಮೇಲೆ ದಾಳಿ
ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಡುಪಿ ಉದ್ಯಾವರದ ಜಯಲಕ್ಷ್ಮಿ ಟೆಕ್ಸ್ ಟೈಲ್ ನಲ್ಲಿ ನರೇಂದ್ರ ಮೋದಿ ಚಿತ್ರವುಳ್ಳ ಸೀರೆಗಳನ್ನು, ಟೋಕನ್ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿರುವ ಕುರಿತ ಖಚಿತ ದೂರು ಬಂದ ಹಿನ್ನಲೆಯಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಮದ್ಯಾಹ್ನ 4 ಗಂಟೆಯ ವೇಳೆಗೆ ಕಾಪು ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಆದರೆ ಅಂಗಡಿ ಮಾಲೀಕರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ […]