ಮೇ.7: ಕೋಟ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ ಜಾತ್ರೆ, ರಥೋತ್ಸವ ಸಂಭ್ರಮ
ಬ್ರಹ್ಮಾವರ: ಕೋಟ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ರಥೋತ್ಸವ ಮೇ. 7ರಂದು ನಡೆಯಲಿದೆ. ಕೋಟ ಹೈಸ್ಕೂಲ್ ಹತ್ತಿರದಲ್ಲಿ ಹಂದಟ್ಟು ಗ್ರಾಮದಲ್ಲಿರುವ ಹಂದೆ ‘ರಥೋತ್ಸವದ ಪ್ರಯುಕ್ತ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಮೇ. 6ರಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೋಟದ ಜ್ಞಾನದೀಪ ನೃತ್ಯ ಕಲಾಕೇಂದ್ರ ಇವರಿಂದ ನೃತ್ಯ ವೈಭವ, 8ಕ್ಕೆ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ವಾರಂಬಳ್ಳಿ ವೆಂಕಪ್ಪಯ್ಯ ವಿರಚಿತ ‘ಸೌಗಂಧಿಕ ಪುಷ್ಪಾಪಹರಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. 7ರ ಸಂಜೆ 5ಕ್ಕೆ ಇನಿದನಿ ಬಳಗ ಕೋಟ ಇವರಿಂದ […]
ಲೋಕಸಭಾ ಚುನಾವಣೆ: ಸಂತೆ, ಜಾತ್ರೆ ನಿಷೇಧ
ಲೋಕಸಭಾ ಚುನಾವಣೆ 2019 ಕ್ಕೆ ಸಂಬಂದಿಸಿದಂತೆ, ಏಪ್ರಿಲ್ 18 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದ್ದು, ಈ ಹಿನ್ನಲೆಯಲ್ಲಿ, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ, ಏಪ್ರಿಲ್ 16 ರಂದು ಸಂಜೆ 6 ಗಂಟೆಯಿಂದ ಏಪ್ರಿಲ್ 18 ರ ರಾತ್ರಿ 12 ಗಂಟೆಯವರೆಗೆ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.
ಮಾ.17: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ
ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಮಾ.17ರಂದು ಶ್ರೀಮನ್ಮಹಾರಥೋತ್ಸವ ನೆರವೇರಲಿದೆ. ದೇಗುಲದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಾರ್ಚ್ 20ರ ವರೆಗೆ ಪ್ರತಿದಿನ ಮಹಾಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ರಂಗಪೂಜೆ ಬಲಿ, ಅಷ್ಟಾವಧಾನ ಸೇವೆಗಳು, ಉತ್ಸವ ಬಲಿ, ಪೂರ್ಣಾಹುತಿ ತೆಪ್ಪೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 18ರಂದು ರಾತ್ರಿ ಆರಾಟೋತ್ಸವ ಹಾಗೂ ಮಾ. 20ರಂದು ಬೆಳಿಗ್ಗೆ ಬ್ರಹ್ಮಕುಂಭಾಭಿಷೇಕ ಜರುಗಲಿದೆ. ಮಾ. 17ರಂದು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ ಎಂದು […]
ಮಡಾಮಕ್ಕಿ ಮಹತೋಭಾರ ಶ್ರೀ ವೀರಭದ್ರ ಸನ್ನಿಧಿಯಲ್ಲಿ ಸಂಭ್ರಮದ ಜಾತ್ರಾಮಹೋತ್ಸವ
ಹೆಬ್ರಿ: ಹೆಬ್ರಿ ತಾಲೂಕಿನ ಮಡಾಮಕ್ಕಿ ಶ್ರೀ ಮಹತೋಭಾರ ವೀರಭದ್ರ ದೇವಸ್ಥಾನದ ವಾರ್ಷಿಕ ಜಾತ್ರಮಹೋತ್ಸವ ಹಾಗೂ ಕೆಂಡಸೇವೆ ಫೆ. 8ರಂದು ವಿಜೃಂಭಣೆಯಿಂದ ನಡೆಯಿತು. ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಧಿವಿಧಾನಗಳು ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದರು.