ಲ್ಯಾಂಡರ್ ಮತ್ತು ಎಕ್ಸ್ ರೇ ಮಿಷನ್ ನೌಕೆ ಸೋಮವಾರ ಉಡಾವಣೆ ಸಾಧ್ಯತೆ: ಚಂದ್ರನತ್ತ ಜಪಾನ್
ಟೋಕಿಯೊ: ಭಾರತದ ಚಂದ್ರಯಾನ-3 ಯಶಸ್ಸಿನ ನಂತರ ಈಗ ಜಪಾನ್ ಚಂದ್ರನತ್ತ ನೌಕೆ ಕಳುಹಿಸಲು ಸಿದ್ಧತೆ ನಡೆಸಿದೆ. ಜಪಾನಿನ ಏರೋಸ್ಪೇಸ್ ಎಕ್ಸ್ಪ್ಲೊರೇಶನ್ ಏಜೆನ್ಸಿಯ (ಜಾಕ್ಸಾ) ಎಸ್‌ಎಲ್‌ಐಎಂ ಅಥವಾ ಸ್ಲಿಮ್ (Smart Lander for Investigating Moon) ಸಣ್ಣ ಪ್ರಮಾಣದ ಹಗುರವಾದ ಸಂಶೋಧನಾ ಕಾರ್ಯಾಚರಣೆ ವ್ಯವಸ್ಥೆಯನ್ನು ಯಶಸ್ವಿಗೊಳಿಸುವ ಮತ್ತು ಭವಿಷ್ಯದ ಚಂದ್ರ ಶೋಧನೆಗಳಿಗೆ ಅಗತ್ಯವಾದ ಪಿನ್ ಪಾಯಿಂಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಸಾಧಿಸುವ ಗುರಿಯನ್ನು ಹೊಂದಿದೆ.ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೋಮವಾರ ಚಂದ್ರನ ಮೇಲ್ಮೈಗೆ ಲ್ಯಾಂಡರ್ ಮತ್ತು ಎಕ್ಸ್-ರೇ ಮಿಷನ್ ನೌಕೆಯನ್ನು ಉಡಾವಣೆ […]